ಬೆಳ್ತಂಗಡಿ: ಈಚರ್ ಲಾರಿಗೆ ಡಿಕ್ಕಿ ಹೊಡೆದ ಬೈಕ್; ಸವಾರ ಸ್ಪಾಟ್ ಡೆತ್

ಸಮಗ್ರ ನ್ಯೂಸ್: ಬೈಕ್ ಮತ್ತು ಈಚರ್ ಲಾರಿ ಪರಸ್ಪರ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೆ.15ರಂದು ರಾತ್ರಿ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಪಿಲ್ಯ ಎಂಬಲ್ಲಿ ನಡೆದಿದೆ

Ad Widget ... ..

ಮೃತ ಯುವಕನನ್ನು ಕುದ್ಮಾಡಿಯ ಪ್ರವೀಣ್ ಆಚಾರ್ಯ ಎಂದು ಗುರುತಿಸಲಾಗಿದೆ. ಘಟನೆ ಬೆನ್ನಲ್ಲೇ ಅಪಘಾತ ಎಸಗಿದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು,ಕೂಡಲೇ ಸ್ಥಳೀಯರು ಬೆನ್ನಟ್ಟಿ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

Ad Widget

ಮೃತ ಪ್ರವೀಣ್ ಆಚಾರ್ಯ ಅವರ ಪಾರ್ಥಿವ ಶರೀರವನ್ನು ಬೆಳ್ತಂಗಡಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ವೇಣೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಘಟನೆಗೆ ಅತಿವೇಗವೆ ಕಾರಣ ಎನ್ನಲಾಗಿದ್ದು, ಅಪಘಾತದ ತೀವ್ರತೆಗೆ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು.

Leave a Comment

Your email address will not be published. Required fields are marked *