Ad Widget .

ಪುನೀತ್ ಹುಟ್ಟುಹಬ್ಬವನ್ನು ಸ್ಪೂರ್ತಿ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರದಿಂದ ಘೋಷಣೆ

ಸಮಗ್ರ ನ್ಯೂಸ್ : ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಇನ್ನು ಮುಂದೆ ‘ಪ್ರೇರಣಾ ದಿನ’ವನ್ನಾಗಿ ಆಚರಣೆ ಮಾಡಲಾಗುವುದು ಎಂದು ಕರ್ನಾಟಕ ಸರ್ಕಾರ ಘೋಷಿಸಿದೆ.

Ad Widget . Ad Widget .

ಮಾರ್ಚ್ 17, ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬವಾಗಿದ್ದು ಆ ದಿನವನ್ನು ಪ್ರೇರಣಾ ದಿನವನ್ನಾಗಿ ಆಚರಿಸಲಾಗುತ್ತದೆ.

Ad Widget . Ad Widget .

ಪುನೀತ್ ರಾಜ್‌ಕುಮಾರ್, ತಮ್ಮ ಸಿನಿಮಾ, ಸಾಮಾಜಿಕ ಕಾರ್ಯಗಳಿಂದ ಕೋಟ್ಯಾಂತರ ಮಂದಿಗೆ ಸ್ಪೂರ್ತಿ ತುಂಬಿದ್ದಾರೆ. ಹಾಗಾಗಿ ಅವರ ಹುಟ್ಟುಹಬ್ಬವನ್ನು ಸ್ಪೂರ್ತಿಯ ದಿನ ಅಥವಾ ಪ್ರೇರಣಾ ದಿನವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ.

ಪುನೀತ್ ರಾಜ್‌ಕುಮಾರ್ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದರು. ಅಪ್ಪು ಮಾಡಿದ್ದ ನೇತೃದಾನ ಹಲವರು ನೇತೃದಾನ ಮಾಡಲು ಸ್ಪೂರ್ತಿ ತುಂಬಿತ್ತು. ಅಪ್ಪು ಮಾಡಿದ್ದ ಸಾಮಾಜಿಕ ಕಾರ್ಯಗಳನ್ನು ಸ್ಪೂರ್ತಿಯಾಗಿರಿಸಿಕೊಂಡು ಹಲವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಇದೆಲ್ಲವನ್ನೂ ಗಮನಿಸಿ ಸರ್ಕಾರ ಹೀಗೊಂದು ಉತ್ತಮ ಘೋಷಣೆಯನ್ನು ಮಾಡಿದೆ.

ಮುಂದಿನ ತಿಂಗಳು ಅಕ್ಟೋಬರ್ 29 ಕ್ಕೆ ಪುನೀತ್ ರಾಜ್‌ಕುಮಾರ್ ಅಗಲಿ ಒಂದು ವರ್ಷ ವಾಗುತ್ತದೆ.

Leave a Comment

Your email address will not be published. Required fields are marked *