Ad Widget .

90 ವರ್ಷಗಳಿಂದ‌ ಈ ಊರಿ‌ನ ಜನರು ಬಟ್ಟೆನೇ ಧರಿಸಿಲ್ಲ! ಇಲ್ಲಿದೆ ಒಂದು ಬೆತ್ತಲೆ ಜಗತ್ತು

ಸಮಗ್ರ ಡಿಜಿಟಲ್ ಡೆಸ್ಕ್: ಫ್ಯಾಷನ್ ಜಗತ್ತಿನಲ್ಲಿ ದಿನಕ್ಕೊಂದು ಸುಂದರ, ಆಕರ್ಷಕ ಬಟ್ಟೆಗಳು ಜನರನ್ನು ಸೆಳೆಯುತ್ತಿವೆ. ಜನರು ಆಕರ್ಷಕ ಬಟ್ಟೆಗಳನ್ನು ಖರೀದಿಸಿ ಅದನ್ನು ಧರಿಸಲು ಉತ್ಸುಕರಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆತ್ತಲಾಗಿರಲು ಇಷ್ಟಪಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕೆಲ ದೇಶಗಳಲ್ಲಿ ಇದಕ್ಕಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಬಟ್ಟೆ ಇಷ್ಟಪಡದ, ಬೆತ್ತಲಾಗಿರಲು ಇಚ್ಛಿಸುವ ಜನರ ಗುಂಪುಗಳೂ ಇವೆ. ಬಟ್ಟೆ ಅಂದ್ರೆ ಅಲರ್ಜಿ ಎನ್ನುವವರು ನೀವೂ ಆಗಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಬಟ್ಟೆಯನ್ನೇ ಧರಿಸದ ಊರಿಗೆ ನೀವು ಪ್ರಯಾಣ ಬೆಳೆಸಬಹುದು. ಬೆತ್ತಲಾಗಿ ಎಲ್ಲ ಕಡೆ ಸುತ್ತಾಡಬಹುದು.

Ad Widget . Ad Widget . Ad Widget .

ಅರೆ ಇದೇನಿದು ಅಂತೀರಾ? ಹೌದು, ನಾವು ಬಟ್ಟೆಗೆ ಕೊಡುವ ಪ್ರಾಮುಖ್ಯತೆಯನ್ನು ಈ ಊರಿನ ಜನ ನೀಡಲ್ಲ. ಈ ಊರಿನಲ್ಲಿ ಯಾರೂ ಬಟ್ಟೆಯನ್ನೇ ಧರಿಸೋದಿಲ್ಲ. ವಿಚಿತ್ರ ಸಂಪ್ರದಾಯ ಪಾಲನೆಯಲ್ಲಿರುವ ಆ ಊರಿನಲ್ಲಿ 90 ವರ್ಷಗಳಿಂದ ಜನರು ಬಟ್ಟೆ ಧರಿಸಿಲ್ಲ.

ಬ್ರಿಟನ್ ನ ಹರ್ಟ್‌ಫೋರ್ಡ್‌ಶೈರ್‌ ನಲ್ಲಿ ಸ್ಪೀಲ್‌ಪ್ಲಾಟ್ಜ್ ಹೆಸರಿನ ಒಂದು ಊರಿದೆ. ಸ್ಪೀಲ್‌ಪ್ಲಾಟ್ಜ್ ಅಂದರೆ ಆಟದ ಮೈದಾನ ಎನ್ನುವ ಅರ್ಥವನ್ನು ನೀಡುತ್ತದೆ. ಈ ಊರು ಸಾಕಷ್ಟು ರಹಸ್ಯದಿಂದ ಕೂಡಿದೆ. ಇಲ್ಲಿ ಜನರು 90 ವರ್ಷಗಳಿಂದ ಬಟ್ಟೆ ಧರಿಸಿಲ್ಲ. ಇವರ ಬಳಿ ಬಟ್ಟೆ ಖರೀದಿಸಲು ಹಣವಿಲ್ಲ ಎಂದಲ್ಲ. ಬಟ್ಟೆ ಧರಿಸದೆ ಇರೋದು ಇಲ್ಲಿನ ಸಂಪ್ರದಾಯ. ಅದನ್ನು ಈಗಲೂ ಜನರು ಪಾಲಿಸಿಕೊಂಡು ಬರ್ತಿದ್ದಾರೆ.

ಕಳೆದ 90 ವರ್ಷಗಳಿಂದ ಇಲ್ಲಿನವರು ಬಟ್ಟೆ ಧರಿಸಿಲ್ಲ. ಬರೀ ಮಕ್ಕಳು ಮಾತ್ರವಲ್ಲ ಹಿರಿಯರು ಕೂಡ ಬೆತ್ತಲಾಗಿಯೇ ಓಡಾಡ್ತಾರೆ. ಹಿಂದಿನಿಂದ ನಡೆದು ಬಂದ ಪದ್ಧತಿಯನ್ನು ಇಲ್ಲಿನವರು ಚಾಚು ತಪ್ಪದೆ ಪಾಲಿಸುತ್ತ ಬಂದಿರುವುದು ವಿಶೇಷ.

ಏಕೆ ಧರಿಸಲ್ಲ ಬಟ್ಟೆ? : ಈ ಸಮುದಾಯವನ್ನು ಚಾರ್ಲ್ಸ್ ಮೆಕ್‌ಕಾಸ್ಕಿ ಎಂಬಾತ 1929ರಲ್ಲಿ ಸ್ಥಾಪನೆ ಮಾಡಿದ್ದಾನೆ. ಪ್ರಕೃತಿ ಹಾಗೂ ನಗರದಲ್ಲಿ ವಾಸಿಸುವ ಜನರಿಗೆ ಯಾವುದೇ ವ್ಯತ್ಯಾಸವಿಲ್ಲವೆಂದು ಆತ ಹೇಳಿದ್ದ. ಹಾಗೆಯೇ ಬೇರೆ ಸಮುದಾಯದವರಿಗೆ ಬಟ್ಟೆ ಧರಿಸದಂತೆ ಆತ ಮನವಿ ಮಾಡಿದ್ದನಂತೆ. ಆತನ ಮಗ 82 ವರ್ಷದ ಐಸೆಲ್ಟ್ ರಿಚರ್ಡ್‌ಸನ್ ಇನ್ನೂ ಬದುಕಿದ್ದು, ಜೀವನವನ್ನು ಆನಂದಿಸುತ್ತಿದ್ದಾನೆ. ಇಲ್ಲಿನ ಜನರು ಪ್ರಕೃತಿ ಪ್ರೇಮಿಗಳು. ದೇವರು ನಮ್ಮನ್ನು ಬಟ್ಟೆಯಿಲ್ಲದೆ ಈ ಪ್ರಪಂಚಕ್ಕೆ ನೀಡಿದ್ದಾನೆ. ಹಾಗಿರುವಾಗ ನಾವು ಬಟ್ಟೆ ಏಕೆ ಧರಿಸಬೇಕು? ಬಟ್ಟೆ ಧರಿಸುವುದು ತಪ್ಪು ಎಂದು ಇಲ್ಲಿನವರು ಭಾವಿಸಿದ್ದಾರೆ.

ಈ ಗ್ರಾಮವೇನೂ ಕುಗ್ರಾಮವಲ್ಲ. ಬೆತ್ತಲಾಗಿ ಓಡಾಡುವ ಇಲ್ಲಿನ ಜನರು ಆಧುನಿಕ ಸೌಲಭ್ಯಗಳನ್ನು ಹೊಂದಿದ್ದಾರೆ. ಜನರು ದೊಡ್ಡ ಮನೆಗಳಲ್ಲಿ ವಾಸಿಸುತ್ತಾರೆ. ಎರಡು ಅಂತಸ್ತಿನ ಮನೆಗಳು ಇಲ್ಲಿವೆ. ಈಜುಕೊಳ, ಬಾರ್‌ ಸೇರಿದಂತೆ ಅನೇಕ ಐಷಾರಾಮಿ ಸೌಲಭ್ಯಗಳು ಈ ಗ್ರಾಮದಲ್ಲಿದೆ. ಈ ಗ್ರಾಮದಲ್ಲಿ 78.6 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಎರಡು ಮಲಗುವ ಕೋಣೆ ಬಂಗಲೆ ಕೂಡ ಇದೆ.

ಈ ಗ್ರಾಮದ ಬಗ್ಗೆ ಅನೇಕ ಸಿನಿಮಾ ಹಾಗೂ ಸಾಕ್ಷ್ಯ ಚಿತ್ರಗಳನ್ನು ಮಾಡಲಾಗಿದೆ. ನೆರೆ ಹೊರೆಯ ಊರಿನವರು, ಪೋಸ್ಟ್ ಮೆನ್ ಗಳು ಅಥವಾ ಡಿಲೆವರಿ ಹುಡುಗರು ಇಲ್ಲಿಗೆ ಬರ್ತಿರುತ್ತಾರೆ. ನೀವು ಈ ಊರು ನೋಡ್ಬೇಕೆಂದ್ರೆ ಆರಾಮವಾಗಿ ಹೋಗಿ ಬರಬಹುದು. ಅದಕ್ಕೆ ನೀವು ಬಟ್ಟೆ ಬಿಚ್ಚಬೇಕಾಗಿಲ್ಲ.

Leave a Comment

Your email address will not be published. Required fields are marked *