Ad Widget .

ಉಕ್ರೇನ್ ನ ಅಧ್ಯಕ್ಷ ಝೆಲೆನ್ ಸ್ಕಿ ಅವರ ಕಾರು ಅಪಘಾತ; ಗಂಭೀರ ಗಾಯ

ಸಮಗ್ರ ನ್ಯೂಸ್ : ಉಕ್ರೇನ್‍ನ ಅಧ್ಯಕ್ಷ ಝೆಲೆನ್‍ಸ್ಕಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ಇಂದು ಬೆಳಗ್ಗೆ ನಡೆದಿದೆ.

Ad Widget . Ad Widget .

ರಷ್ಯಾ ವಿರುದ್ಧ ನಡೆಯುತ್ತಿರುವ ಯುದ್ಧದ ನಡೆವೆಯೇ ಉಕ್ರೇನ್ ಸೇನಾ ಪಡೆಯ ಯೋಧರನ್ನು ಭೇಟಿ ಮಾಡಿ ಕೈವ್‍ಗೆ ತೆರಳುತ್ತಿದ್ದಾಗ ಅವರ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ ಎಂದು ಮೂಲಗಳು ತಿಳಿಸಿವೆ.

Ad Widget . Ad Widget .

ಅಪಘಾತವಾಗುತ್ತಿದ್ದಂತೆಯೇ ಗಾಯಗೊಂಡಿದ್ದ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ರಷ್ಯಾ ಪಡೆಗಳಿಂದ ಇಜಿಯಂ ನಗರವನ್ನು ಮರು ವಶಪಡಿಸಿಕೊಳ್ಳಲಾಗಿದ್ದು, ಅಲ್ಲಿಗೆ ಅಧ್ಯಕ್ಷರು ಭೇಟಿ ನೀಡಿದ್ದರು. ನಂತರ ಮುಂಜಾನೆಯೇ ಕೈವ್ ಕಡೆಗೆ ಬರುತ್ತಿದ್ದಾಗ ಅಪಘಾತ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *