ಟೆನ್ನಿಸ್ ಕೋರ್ಟ್ ಗೆ ಗುಡ್ ಬೈ ಹೇಳಿದ ರೋಜರ್ ಫೆಡರರ್

ಸಮಗ್ರ ನ್ಯೂಸ್: ಲ್ಯಾವರ್ ಕಪ್ 2022 ನಂತರ ವೃತ್ತಿಪರ ಟೆನಿಸ್ ನಿಂದ ವಿರಾಮ ಪಡೆಯುವುದಾಗಿ ಟೆನಿಸ್ ದಂತಕಥೆ ರೋಜರ್ ಫೆಡರರ್ ( Roger Federer) ಘೋಷಣೆ ಮಾಡಿದ್ದಾರೆ. ಈ ಮೂಲಕ ಖ್ಯಾತ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಟೆನ್ನಿಸ್ ನಿಂದ ಹೊರಗೆ ಉಳಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

Ad Widget ... ..

ಟ್ವಿಟ್ಟರ್ ನಲ್ಲಿ ತಮ್ಮ ನಿವೃತ್ತಿಯ ಬಗ್ಗೆ ಸುಧೀರ್ಘ ಪತ್ರದ ಮೂಲಕ ಟೆನಿಸ್ ಅಂಗಣದಲ್ಲಿ ಒಂದು ಯುಗ ಕಾಲ ಪ್ರಾಬಲ್ಯ ಮೆರೆದಿದ್ದ 20 ಪ್ರಮುಖ ಪ್ರಶಸ್ತಿಗಳ ವಿಜೇತ 41 ವರ್ಷದ ರೋಜರ್ ಫೆಡರರ್ ಗುರುವಾರ ನಿವೃತ್ತಿ ಘೋಷಿಸಿದ್ದಾರೆ.

Ad Widget

‘ನನಗೆ 41 ವರ್ಷ, ನಾನು 24 ವರ್ಷಗಳಲ್ಲಿ 1,500 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ, ಟೆನಿಸ್ ನಾನು ಕನಸು ಕಂಡಿದ್ದಕ್ಕಿಂತ ಹೆಚ್ಚು ಉದಾರವಾಗಿ ನನ್ನನ್ನು ನಡೆಸಿಕೊಂಡಿದೆ’ ಎಂದು ಫೆಡರರ್ ಸಾಮಾಜಿಕ ಮಾಧ್ಯಮದಲ್ಲಿ‌ ಹೇಳಿಕೊಂಡಿದ್ದಾರೆ. ‘ ಈಗ ನನ್ನ ಸ್ಪರ್ಧಾತ್ಮಕ ವೃತ್ತಿಜೀವನವನ್ನು ಕೊನೆಗೊಳಿಸುವ ಸಮಯ ಬಂದಾಗಿದೆ ಎಂದು ಹೇಳಿದರು.

Leave a Comment

Your email address will not be published. Required fields are marked *