ಸಮಗ್ರ ನ್ಯೂಸ್: ಅಜ್ಜಾವರ ಗ್ರಾಮದ ಅಡ್ಪಂಗಾಯ ಬಸ್ ನಿಲ್ದಾಣ ಬಳಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ದನಿಗೆ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದು ವೃದ್ದನ ಎರಡೂ ಕಾಲು ತುಂಡಾಗಿ ಗಂಭೀರ ಗಾಯಗೊಂಡ ಘಟನೆ ಸೆ.೧೫ ರಂದು ವರದಿಯಾಗಿದೆ.
ಕಾಲು ಕಳೆದುಕೊಂಡ ವೃದ್ಧನ್ನು ಮುದರ ಎಂದು ಗುರುತಿಸಲಾಗಿದೆ. ಇವರು ಹಾಗೂ ಪ್ರಭಾಕರ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ, ಮಂಡೆಕೋಲಿನಿಂದ ಸುಳ್ಯ ಕಡೆಗೆ ಹೋಗುತ್ತಿದ್ದ ಮಂಡೆಕೋಲಿನ ಮಾರ್ಗ ಎಂಬಲ್ಲಿಯ ಕೌಶಿಕ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಇಬ್ಬರಿಗೂ ಡಿಕ್ಕಿ ಹೊಡೆದಿದೆ.
ಡಿಕ್ಕಿಯಾದ ರಬಸಕ್ಕೆ ಪ್ರಭಾಕರ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾದರೆ ಮುದರ ಎಂಬವರ ಕಾಲು ತುಂಡಾಗಿ ಗಂಭೀರ ಗಾಯಗೊಂಡರು ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಅಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ಸಾಗಿಸಲಾಗಿದೆ.