Ad Widget .

ಯೋಗಿನಾಡಲ್ಲಿ ದಲಿತ ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರವೆಸಗಿ ಕೊಲೆ| ಮತ್ತೊಂದು ಕರಾಳ ಘಟನೆಗೆ ಸಾಕ್ಷಿಯಾಯ್ತು ಲಖೀಂಪುರ

ಸಮಗ್ರ ನ್ಯೂಸ್: ಯೋಗಿ ಆದಿತ್ಯನಾಥ್ ರವರ ರಾಜ್ಯ ಉತ್ತರ ಪ್ರದೇಶದ ಲಖೀಂಪುರಖೇರಿಯಲ್ಲಿ ಇಬ್ಬರು ದಲಿತ ಸಹೋದರಿಯರು ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಈ ಬಾಲಕಿಯರ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಆರು ಮಂದಿಯನ್ನು ಬಂಧಿಸಲಾಗಿದೆ.

Ad Widget . Ad Widget .

15 ಮತ್ತು 17 ವರ್ಷದ ಈ ಹೆಣ್ಣುಮಕ್ಕಳನ್ನು ಇಬ್ಬರು ಆರೋಪಿಗಳು ಮದುವೆ ಮಾಡಿಕೊಳ್ಳುವುದಾಗಿ ಹೇಳಿ, ನಾಲ್ವರ ಜತೆಗೆ ಸೇರಿಕೊಂಡು ಅತ್ಯಾಚಾರ ಎಸಗಿ, ಕತ್ತುಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳನ್ನು ಸುಹೈಲ್, ಜುನೈದ್, ಹಫೀಜುಲ್, ರೆಹಮಾನ್, ಕರೀಮುದ್ದೀನ್ ಮತ್ತು ಆಸಿಫ್ ಅಂತ ಗುರುತಿಸಲಾಗಿದೆ.

Ad Widget . Ad Widget .

ಜಮೀನಿಗೆ ಬಾಲಕಿಯರನ್ನು ಕರೆದುಕೊಂಡು ಹೋಗಿ, ಜುನೈದ್ ಮತ್ತು ಸುಹೈಲ್ ಅತ್ಯಾಚಾರ ಎಸಗಿದ್ದಾರೆ ಎಂದು SP ಸಂಜೀವ್ ಸುಮನ್ ಹೇಳಿದ್ದಾರೆ. ತಮ್ಮನ್ನು ಮದುವೆಯಾಗುವಂತೆ ಬಾಲಕಿಯರು ಪಟ್ಟು ಹಿಡಿದಾಗ, ಅವರ ವೇಲ್‌ನಿಂದಲೇ ಕತ್ತು ಹಿಸುಕಿದ್ದಾರೆ. ಸ್ಥಳಕ್ಕೆ ಬಂದ ಕರೀಮುದ್ದೀನ್ ಮತ್ತು ಆಸಿಫ್ ಕೂಡ ಇದಕ್ಕೆ ಸಹಾಯ ಮಾಡಿದ್ದಾರೆ. ಬಳಿಕ ಮರಕ್ಕೆ ನೇಣು ಹಾಕಿ, ಆತ್ಮಹತ್ಯೆ ಅನ್ನುವಂತೆ ಬಿಂಬಿಸಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಬಾಲಕಿಯರನ್ನು ಅಪಹರಣ ಮಾಡಿರಲಿಲ್ಲ. ಅವರು ಸ್ವ ಇಚ್ಛೆಯಿಂದಲೇ ದುಷ್ಕರ್ಮಿಗಳ ಜೊತೆ ಬೈಕ್‌ನಲ್ಲಿ ತೆರಳಿದ್ದರು.

ಸಹೋದರಿಯರಿಬ್ಬರಿಗೂ ಜುನೈದ್ ಮತ್ತು ಸುಹೈಲ್ ಜತೆ ಗೆಳೆತನವಿತ್ತು ಅಂತ ಹೇಳಲಾಗಿದೆ. ಇನ್ನು ಒಬ್ಬ ಆರೋಪಿಯನ್ನು ಎನ್‌ಕೌಂಟರ್‌ ಮೂಲಕ ಖೆಡ್ಡಾಗೆ ಕೆಡವಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ BSP ಮುಖ್ಯಸ್ಥೆ ಮಾಯಾವತಿ ಪ್ರತಿಕ್ರಿಯಿಸಿ ಇದೊಂದು ನಾಚಿಕೆಗೇಡಿನ ವಿಚಾರ ಅಂತ ಆಕ್ರೋಶ ಹೊರಹಾಕಿದ್ದಾರೆ. ಅಲ್ದೇ ಯುಪಿ ಸಿಎಂ ಯೋಗಿಗೆ ಕಠಿಣ ಕ್ರಮ ತಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Leave a Comment

Your email address will not be published. Required fields are marked *