Ad Widget .

ಗೂಡ್ಸ್‌ ಲಾರಿ ಢಿಕ್ಕಿ| ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಮುಂಭಾಗದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ 6 ಗಂಟೆಗೆ ಸುಮಾರಿಗೆ ಅಪರಿಚಿತ ಗೂಡ್ಸ್‌ ಲಾರಿ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿ ಸಮರ್ಥ್ (14) ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ. ಸಮರ್ಥ್ ತಂದೆ ಪ್ರಭಾಕರ್ ನಿನ್ನೆ ಅಪಘಾತದ ಸ್ಥಳದಲ್ಲೇ ಮೃತಪಟ್ಟಿದ್ದರು.

Ad Widget . Ad Widget .

ಮೃತರಾದ ಪ್ರಭಾಕರ್ ಹಾಗೂ ಮಗ ಸಮರ್ಥ್ ಬೆಳಗಾವಿಯಿಂದ ಮಂಗಳವಾರ ರಾತ್ರಿ ಸರಕಾರಿ ಬಸ್ಸು ಮೂಲಕ ಹೊರಟು ಕಾಪು ಸಮೀಪದ ಕುತ್ಯಾರಿನ ಆನೆಗುಂದಿ ಸಂಸ್ಥಾನದ ವಿದ್ಯಾ ಸಂಸ್ಥೆಯಲ್ಲಿ ಓದುತ್ತಿದ್ದ ಮಗನನ್ನು ಚೌತಿಯ ರಜೆ ಬಳಿಕ ಮರಳಿ ಬಿಡಲು ಆಗಮಿಸಿದ್ದರು. ಬೆಳಗ್ಗೆ ಬಸ್ಸಿನಿಂದ ಇಳಿದು ರಸ್ತೆ ಬದಿಯ ಮಣ್ಣು ರಸ್ತೆಯೊಂದರಲ್ಲಿ ನಿಂತಿದಿದ್ದಾಗ ವೇಗವಾಗಿ ಬಂದ ಗೂಡ್ಸ್ ಲಾರಿ ತೀರ ಎಡಭಾಗಕ್ಕೆ ಚಲಿಸಿ ಇವರಿಬ್ಬರ ಮೇಲೆ ಹರಿದು ಡಿವೈಡರ್ ಏರಿ ಆ ಬಳಿಕವೂ ನಿಲ್ಲಿಸದೆ ಪರಾರಿಯಾಗಿದೆ.

Ad Widget . Ad Widget .

ಘಟನೆಯ ಭೀಕರತೆಗೆ ಪ್ರಭಾಕರ್ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನು ಸೆ.15 ರ ಇಂದು ಪುತ್ರ ಸಮರ್ಥ್ ಕೂಡಾ ಮೃತಪಟ್ಟಿದ್ದಾನೆ.

ಪೊಲೀಸರು ಅಪರಿಚಿತ ಗೂಡ್ಸ್ ವಾಹನದ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *