Ad Widget .

ಕೊಟ್ಟಿಗೆಹಾರ: ಬಸ್, ಕಾರ್ ನಡುವೆ ಅಪಘಾತ

ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಚಾರ್ಮಾಡಿ ಘಾಟ್ ನಲ್ಲಿ ಬಸ್ ಹಾಗೂ ಕಾರ್ ನಡುವೆ ಅಪಘಾತವಾದ ಘಟಣೆ ಸೆ.14ರ ಸಂಜೆ ಸಂಭವಿಸಿದೆ.

Ad Widget . Ad Widget .

ಅರಸೀಕೆರೆಯಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಕಾರು, ಧರ್ಮಸ್ಥಳದಿಂದ ಕಡೂರಿಗೆ ಬರುತ್ತಿದ್ದ ಬಸ್ ನಡುವೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿ ಇದ್ದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಗಾಯಾಳನ್ನು ಬಣಕಲ್ ನಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗೆ ಮೂಡಿಗೆರೆಗೆ ರವಾನೆ ಮಾಡಲಾಗಿದೆ.

Ad Widget . Ad Widget .

ಇನ್ನೂ ಈ ವೇಳೆ ಒಂದು ಕಿಲೋಮೀಟರ್ ಹೆಚ್ಚು ದೂರ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳಕ್ಕೆ ಬಣಕಲ್ ಠಾಣಾಧಿಕಾರಿ ಗಾಯಿತ್ರಿ ಭೇಟಿ ನೀಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

Leave a Comment

Your email address will not be published. Required fields are marked *