Ad Widget .

ದ.ಕ ಜಿಲ್ಲಾಧಿಕಾರಿ ಮೊಬೈಲ್ ನಂಬರ್ ಹ್ಯಾಕ್| ದೂರು ದಾಖಲಿಸಿದ ಡಿ.ಸಿ; ಮೋಸ ಹೋಗದಂತೆ ಮನವಿ

ಸಮಗ್ರ ನ್ಯೂಸ್: ಮೊಬೈಲ್ ಸಂಖ್ಯೆಯೊಂದರ ವಾಟ್ಸ್‌ ಆ್ಯಪ್‌ನಿಂದ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಹೆಸರು ಮತ್ತು ಫೋಟೋವನ್ನು ದುರ್ಬಳಕೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮೊ.ಸಂ: 8590710748ರ ವಾಟ್ಸ್‌ ಆ್ಯಪ್‌ನಲ್ಲಿ ತನ್ನ ಹೆಸರು ಹಾಗೂ ಫೋಟೊ ದುರ್ಬಳಕೆ ಮಾಡಲಾಗಿದೆ. ಅಪರಿಚಿತರು ಈ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಸಹಾಯ ಅಥವಾ ಹಣವನ್ನು ವರ್ಗಾಯಿಸಲು ವಿನಂತಿಸಬಹುದು. ಆ ನಂಬರ್ ತನ್ನದ್ದಲ್ಲ. ಹಾಗಾಗಿ ಯಾರೂ ಕೂಡ ಯಾವುದೇ ರೀತಿಯಲ್ಲಿ ಸಹಾಯ ಅಥವಾ ಹಣವನ್ನು ಆ ನಂಬರ್‌ಗೆ ವರ್ಗಾಯಿಸದಂತೆ ಡಿಸಿ ರಾಜೇಂದ್ರ ಕೆ.ವಿ. ಮನವಿ ಮಾಡಿದ್ದಾರೆ.

Ad Widget . Ad Widget . Ad Widget .

8590710748 ಈ ನಂಬರ್‌ನಿಂದ ಯಾವುದೇ ರೀತಿಯ ಮನವಿ ಬಂದಲ್ಲಿ ಅದನ್ನು ಬ್ಲಾಕ್ ಮಾಡಿ ವರದಿ ಮಾಡುವಂತೆಯೂ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

Leave a Comment

Your email address will not be published. Required fields are marked *