Ad Widget .

ತವರಿನಿಂದ ಬರಲೊಪ್ಪದ ಪತ್ನಿಯ ಕರೆತರಲು ಗುಂಡು ಹಾರಿಸಿದ ಭೂಪ

ಸಮಗ್ರ ನ್ಯೂಸ್: ತವರಿನಿಂದ ವಾಪಸ್ ಬರಲೊಪ್ಪದ ಪತ್ನಿಯ ಮೇಲೆ ವ್ಯಕ್ತಿಯೋರ್ವ ಗುಂಡು ಹಾರಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.

Ad Widget . Ad Widget .

ವಿಜಯಪುರ ಜಿಲ್ಲೆ ಸಿಂಧಗಿಯ ಶಿವಾನಂದ ಕಾಲೆಬಾಗ ಗುಂಡು ಹಾರಿಸಿದ ಆರೋಪಿ. ಘಟನೆಗೆ ಸಂಬಂಧಿಸಿದಂತೆ ಈತನ ಪತ್ನಿ ಪ್ರೀತಿ ಅಥಣಿ ಠಾಣೆಯಲ್ಲಿ ದೂರು ನೀಡಿದ್ದಾರೆ.

Ad Widget . Ad Widget .

ಅಥಣಿಯ ಪ್ರೀತಿ ಎಂಬಾಕೆಯನ್ನು ಸಿಂಧಗಿಯ ಶಿವಾನಂದನಿಗೆ 4 ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಕೆಲವು ತಿಂಗಳು ಚೆನ್ನಾಗಿ ಜೀವನ ಮಾಡಿಕೊಂಡಿದ್ದ ಆರೋಪಿ ಬಳಿಕ ಬೇರೊಂದು ಮಹಿಳೆಯೊಂದಿಗೆ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಪ್ರೀತಿ ಅಥಣಿಯ ತವರು ಮನೆಗೆ ಬಂದು ವಾಸವಾಗಿದ್ದಳು. ಈ ದಂಪತಿಗೆ ಮೂರು ವರ್ಷದ ಮಗುವೂ ಇದೆ.

ಆದರೆ ಆ.12 ರಂದು ಅಥಣಿಗೆ ಬಂದ ಶಿವಾನಂದ ತನ್ನಲ್ಲಿದ್ದ ರಿವಾಲ್ವರನ್ನು ತೋರಿಸಿ ಬೆದರಿಸಿ ತನ್ನ ಜತೆ ವಾಪಸ್ ಬರುವಂತೆ ಧಮಕಿ ಹಾಕಿದ್ದ. ಅಲ್ಲದೇ ರಿವಾಲ್ವರಿನಿಂದ ಎರಡು ಗುಂಡುಗಳನ್ನು ಹಾರಿಸಿದ್ದಾನೆ. ತನ್ನ ಜತೆ ಬರದಿದ್ದರೆ ರಿವಾಲ್ವರಿನಲ್ಲಿರುವ ಉಳಿದ ಗುಂಡುಗಳನ್ನು ನಿನ್ನ ತಲೆಗೆ ಹೊಡೆಯುತ್ತೇನೆ ಪತ್ನಿಗೆ ಧಮಕಿ ಹಾಕಿದ್ದಾನೆ.

ಹೆದರಿದ ಪ್ರೀತಿ ಅಥಣಿ ಠಾಣೆಗೆ ದೂರು ನೀಡಿದ್ದಾಳೆ. ಆರೋಪಿಯ ರಿವಾಲ್ವರ್ ಬಿಜಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಮಾತ್ರ ಬಳಸಲು ಅನುಮತಿಯಿರುವುದು ಮತ್ತು ಪತ್ನಿಯೆಡೆಗೆ ಗುಂಡು ಹಾರಿಸಿ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ರಿವಾಲ್ವರ್ ವಶಕ್ಕೆ ಪಡೆದಿದ್ದಾರೆ .

Leave a Comment

Your email address will not be published. Required fields are marked *