Ad Widget .

ಉದ್ಯೋಗ ದಲ್ಲಿದ್ದ ಯುವಕ ಹಣವಿದ್ದ ಬ್ಯಾಗ್ ನೊಂದಿಗೆ ನಾಪತ್ತೆ

ಸಮಗ್ರ ನ್ಯೂಸ್: ಹಣವಿದ್ದ ಬ್ಯಾಗ್‌ನೊಂದಿಗೆ ಹೋದ ಯುವಕ ಮನೆಗೂ ಬಾರದೆ, ಕೆಲಸಕ್ಕೂ ಹಾಜರಾಗದೇ ನಾಪತ್ತೆಯಾದ ಘಟನೆಯೊಂದು ವರದಿಯಾಗಿದೆ.

Ad Widget . Ad Widget .

ನಾಪತ್ತೆಯಾದ ಯುವಕನನ್ನು ನಗರದ ಮಾಯಾ ಟ್ರೇಡರ್ಸ್‌ನಲ್ಲಿ ಉದ್ಯೋಗಿಯಾಗಿರುವ ಕೃಷ್ಣ ಶೆಣೈ (23) ಎಂದು ಗುರುತಿಸಲಾಗಿದೆ.

Ad Widget . Ad Widget .

ಈತ ಮೂರು ತಿಂಗಳಿಂದ ಮಾಯಾ ಟ್ರೇಡರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಕೆಲವರಿಂದ ಸಾಲ ಪಡೆದಿದ್ದು, ಇದನ್ನು ತೀರಿಸುವ ಸಲುವಾಗಿ ಭುವನೇಂದ್ರ ಬ್ಯಾಂಕ್‌ನಿಂದ ಎರಡು ಲಕ್ಷ ರೂಪಾಯಿ ಸಾಲವನ್ನೂ ಕೂಡಾ ಪಡೆದಿದ್ದು, ಆದರೆ ಆತ ಅಂದಿನಿಂದ ನಾಪತ್ತೆಯಾಗಿದ್ದಾನೆ.

ಕೃಷ್ಣ 5 ಅಡಿ 11 ಇಂಚು ಎತ್ತರ, ಗೋಧಿ ಮೈಬಣ್ಣ, ಸ್ಪೋರ್ಟ್ಸ್ ಟ್ರಿಮ್ ಮಾಡಿದ ಗಡ್ಡ, ಸಾಧಾರಣ ಮೈಕಟ್ಟು ಮತ್ತು ಎರಡೂ ಕೈಗಳಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾನೆ.

ಅವರು ಕನ್ನಡ, ಕೊಂಕಣಿ, ತುಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತನಾಡುತ್ತಾರೆ.

ಈ ಬಗ್ಗೆ ಈತನ ತಂದೆ ಪಾಡುರಂಗ ಶೆಣೈ ನೀಡಿದ ದೂರಿನಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *