Ad Widget .

ಕೆಎಸ್ ಪಿ 3484 ಕಾನ್ ಸ್ಟೇಬಲ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ| ತೃತೀಯ ಲಿಂಗಿಗಳಿಗೂ ಅವಕಾಶ

ಸಮಗ್ರ ನ್ಯೂಸ್: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 3,484 ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪೇದೆ (ಡಿಆರ್) ಹಾಗೂ ನಗರ ಸಶಸ್ತ್ರ ಮೀಸಲು ಪೊಲೀಸ್ (ಸಿಎಆರ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Ad Widget . Ad Widget .

ಈ ಕುರಿತು ಸೋಮವಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿದೆ.
ಶೀಘ್ರದಲ್ಲೇ ವೆಬ್‌ಸೈಟ್‌ನಲ್ಲಿ ಪೊಲೀಸ್ ಇಲಾಖೆ ನೋಟಿಫಿಕೇಶನ್‌ನ್ನು ಪ್ರಕಟಿಸಲಿದೆ.

Ad Widget . Ad Widget .

ಅರ್ಹ ಅಭ್ಯರ್ಥಿಗಳು ಇದೇ ತಿಂಗಳು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 31ರವರರೆಗೆ Ksp-recruitment.in ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ರಾಜ್ಯದ ಎಲ್ಲ ಜಿಲ್ಲೆ ಹಾಗೂ ಕಮಿಷನರೇಟ್ ವ್ಯಾಪ್ತಿಯಯಲ್ಲಿ 2,996 ಸಾಮಾನ್ಯ ಪುರುಷ ಡಿಆರ್ ಹಾಗೂ ಸಿಎಆರ್ ಹುದ್ದೆಗಳಿವೆ. ಇದರೊಂದಿಗೆ ತೃತೀಯ ಲಿಂಗಿಗಳಿಗೂ (ಪುರುಷ) ಹೆಚ್ಚುವರಿಯಾಗಿ 68 ಹುದ್ದೆಗಳಿವೆ. ಯುವತಿಯರಿಗೆ ಅಥವಾ ಮಹಿಳೆಯರಿಗೆ ಹುದ್ದೆಗಳಿಲ್ಲ. ಹೈದರಾಬಾದ್ ಕರ್ನಾಟಕ ವಿಭಾಗದ 420 ಡಿಆರ್ ಹಾಗೂ ಸಿಎಆರ್ ಹುದ್ದೆಗಳಿವೆ.

ಎಸ್.ಎಸ್‌.ಎಲ್‌.ಸಿ ಅಥವಾ ತತ್ಸಮಾನ ಕನಿಷ್ಠ ಶೈಕ್ಷಣಿಕ ವಿದ್ಯಾಹರ್ತೆಯನ್ನು ಈ ಹುದ್ದೆಗಳಿಗೆ ನಿಗದಿಗೊಳಿಸಲಾಗಿದೆ. ಕನಿಷ್ಠ 18 ವರ್ಷ ವಯಸ್ಸು ಮೀರಿದವರು ಅರ್ಜಿ ಸಲ್ಲಿಸಬಹುದು. ಎಸ್‌ಸಿ, ಎಸ್‌ಟಿ, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 27, ಸಾಮಾನ್ಯ ಅಭ್ಯರ್ಥಿಗಳಿಗೆ 25 ವಯಸ್ಸನ್ನು ನಿಗದಿಗೊಳಿಸಲಾಗಿದೆ.

ವೇತನ ಶ್ರೇಣಿಯೂ 23,500-47650 ಇರಲಿದೆ. ಲಿಖಿತ ಪರೀಕ್ಷೆ ನಂತರ, ದೇಹದಾರ್ಢ್ಯತೆ ಪರೀಕ್ಷೆ ಇರುತ್ತದೆ. ಆ ನಂತರ ಮೆರಿಟ್ ಆಧಾರ ಹಾಗೂ ಮೀಸಲಾತಿ ಅನುಗುಣವಾಗಿ ಆಯ್ಕೆ ಪಟ್ಟಿ ‍ಪ್ರಕಟವಾಗುತ್ತದೆ.

ಯಾವ ಜಿಲ್ಲೆಗೆ ಹಾಗೂ ಕಮಿಷನರೇಟ್‌ಗೆ ಎಷ್ಟು ಹುದ್ದೆಗಳು ಮೀಸಲಿವೆ ಮತ್ತು ಇನ್ನಿತರ ಹೆಚ್ಚಿನ ಮಾಹಿತಿಗಳಿಗೆ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ https://recruitment.ksp.gov.in ನೋಡಬಹುದು.

Leave a Comment

Your email address will not be published. Required fields are marked *