Ad Widget .

ಕಡಬ: ಅಪ್ರಾಪ್ತ ಬಾಲಕಿಗೆ ಮಾವನಿಂದಲೇ ಗರ್ಭದಾನ| ಆರೋಪಿಯ ವಿರುದ್ದ ದೂರು ದಾಖಲು

ವ್ಯಕ್ತಿಯೋರ್ವ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ ಘಟನೆ ಕಡಬದಲ್ಲಿ ನಡೆದಿದ್ದು, ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಕೊಂಬಾರು ನಿವಾಸಿ ರುಕ್ಮಯ್ಯ(31) ಎಂಬಾತ ಆರೋಪಿ.

Ad Widget . Ad Widget .

ಆರೋಪಿ ರುಕ್ಮಯ್ಯ ಸಂತ್ರಸ್ತೆಯ ಮಾವನಾಗಿದ್ದು, ಸಂತ್ರಸ್ತ ಬಾಲಕಿ 3 ವರ್ಷಗಳ ಹಿಂದೆ ಆತನ ಮನೆಗೆ ಮಕ್ಕಳನ್ನು ನೋಡಿಕೊಳ್ಳಲು ಹೋದ ಸಂದರ್ಭದಲ್ಲಿ ಬಾಲಕಿ ಮೇಲೆ ರುಕ್ಮಯ್ಯ ಅತ್ಯಾಚಾರ ಎಸಗಿದ್ದಾನೆ.

Ad Widget . Ad Widget .

ಇದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಒಂದು ದಿನ ಸಂತ್ರಸ್ತ ಬಾಲಕಿಯನ್ನು ಬಲವಂತವಾಗಿ ಮನೆಯಲ್ಲಿ ಎಲ್ಲರೂ ಮಲಗಿದ ವೇಳೆ ಮನೆಯ ಹಾಲ್‌ನ ಪಕ್ಕದಲ್ಲಿರುವ ರೂಮಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ.

ಈ ವಿಷಯವನ್ನು ಯಾರಿಗೂ ಹೇಳಬೇಡ ನಿನ್ನನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ, ನೀನು ಏನಾದರೂ ಈ ವಿಷಯವನ್ನು ಹೇಳಿದರೆ ನಿನ್ನನ್ನು ಮನೆಯಿಂದ ಓಡಿಸಿಬಿಡುತ್ತೇನೆ ಎಂದು ಬೆದರಿಸಿರುತ್ತಾನೆ. ಅದಲ್ಲದೆ 4-5 ಬಾರಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ.

ಸೆ.9ರಂದು ಕೊಂಬಾರು ಗ್ರಾಮಕ್ಕೆ ಬರುವ ಆಶಾ ಕಾರ್ಯಕರ್ತೆ ಸುನಿತಾ ಎಂಬವರು ಸಂತ್ರಸ್ತ ಬಾಲಕಿಯ ಹೊಟ್ಟೆಯನ್ನು ನೋಡಿ ಎಷ್ಟು ತಿಂಗಳು ಎಂದು ಕೇಳಿ ವಿಚಾರಿಸಿರುತ್ತಾರೆ. ಆ ಸಮಯದಲ್ಲಿ ಬಾಲಕಿ ಆಶಾ ಕಾರ್ಯಕರ್ತೆಗೆ ತನ್ನ ಮಾವನಾದ ರುಕ್ಮಯ್ಯ ಲೈಂಗಿಕವಾಗಿ ಬಳಸಿಕೊಂಡಿರುವ ಬಗ್ಗೆ ತಿಳಿಸಿದ್ದು, ಆಶಾ ಕಾರ್ಯಕರ್ತೆ ಸುನಿತಾರವರು ಪ್ರಗ್ನೆನ್ಸಿ ಟೆಸ್ಟ್ ಕಿಟ್‌ ತೆಗೆದುಕೊಂಡು ಟೆಸ್ಟ್ ಮಾಡಿದಾಗ ಬಾಲಕಿ ಗರ್ಭಿಣಿಯಾಗಿರುವುದು ತಿಳಿದಿರುತ್ತದೆ.

ಬಾಲಕಿಯನ್ನು ಬಲವಂತವಾಗಿ 4-5 ಬಾರಿ ಲೈಂಗಿಕ ಕ್ರಿಯೆ ಮಾಡಿ ಗರ್ಭೀಣಿಯಾಗಲು ಕಾರಣನಾದ ರುಕ್ಮಯ್ಯನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಸಂತ್ರಸ್ತ ಬಾಲಕಿ ನೀಡಿದ ದೂರಿನನ್ವಯ ಆರೋಪಿ ರುಕ್ಮಿಯ್ಯನ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Comment

Your email address will not be published. Required fields are marked *