Ad Widget .

” ನೀರು ಕೊಡೋ ಮಗನೇ ಏಕವಚನದಲ್ಲಿ ಕೇಳಿದಕ್ಕೆ ಎರಡು ಆಟೋ ಚಾಲಕರ ಗಲಾಟೆಯಲ್ಲಿ ಓರ್ವ ಸಾವು

ಸಮಗ್ರ ನ್ಯೂಸ್: “ನೀರು ಕೊಡೋ ಮಗನೇ’ ಎಂದು ಏಕವಚನದಲ್ಲಿ ಕೇಳಿದ ವಿಚಾರಕ್ಕೆ ಇಬ್ಬರು ಆಟೋ ಚಾಲಕರ ನಡುವೆ ನಡೆದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪೀಣ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Ad Widget . Ad Widget .

ಆರ್‌.ಟಿ.ನಗರ ನಿವಾಸಿ ಸಿದ್ದಿಕ್‌ (23) ಕೊಲೆಯಾದ ಆಟೋ ಚಾಲಕ.

Ad Widget . Ad Widget .

ಈ ಸಂಬಂಧ ಅಜಯ್‌ ಎಂಬ ಆಟೋ ಚಾಲಕನನ್ನು ಬಂಧಿಸಲಾಗಿದೆ. ಜಾಲಹಳ್ಳಿ ಕ್ರಾಸ್‌ನಲ್ಲಿರುವ ಆಟೋ ನಿಲ್ದಾಣದಲ್ಲಿ ರಾತ್ರಿ 11.30ರ ಸುಮಾರಿಗೆ ಅಜಯ್‌ ಎಂಬಾತ ಆಟೋ ನಿಲ್ಲಿಸಿಕೊಂಡು ನಿಂತಿದ್ದ.

ಅದೇ ವೇಳೆಯಲ್ಲಿ ಸಿದ್ದಿಕ್‌ ಆಟೋ ನಿಲ್ದಾಣಕ್ಕೆ ಬಂದಿದ್ದಾನೆ. ಆಗ “ಏನೋ ಮಗನೇ ನೀರಿದ್ದರೆ ಕೋಡೋ’ ಎಂದು ಏರುಧ್ವನಿಯಲ್ಲಿ ಸಿದ್ದಿಕ್‌ ಕೇಳಿದ್ದಾನೆ.

ಅದಕ್ಕೆ ಕೋಪಗೊಂಡ ಅಜಯ್‌, “ಮಗನೇ’ ಎಂದು ಕರೆಯುತ್ತಿಯಾ ಎಂದು ಜಗಳವಾಡಿದ್ದಾನೆ. ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಇದು ವಿಕೋಪಕ್ಕೆ ಹೋಗಿದ್ದು, ಆಕ್ರೋಶಗೊಂಡ ಅಜಯ್‌, ಚಾಕುವಿನಿಂದ ಸಿದ್ದಿಕ್‌ನ ಎದೆ, ಹೊಟ್ಟೆ ಹಾಗೂ ಇತರೆ ಭಾಗಗಳಿಗೆ ಇರಿದಿದ್ದಾನೆ.

ರಕ್ತಸ್ರಾವದಲ್ಲಿ ಬಿದ್ದಿದ್ದ ಸಿದ್ದಿಕ್‌ನನ್ನು ಇತರೆ ಆಟೋ ಚಾಲಕರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.

ಈ ಬಗ್ಗೆ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *