Ad Widget .

ಪ್ರವೀಣ್ ನೆಟ್ಟಾರು ಕನಸಿನ ಮನೆಯನ್ನು ನನಸಾಗಿಸಲು ನಳೀನ್ ಕುಮಾರ್ ಕಟೀಲ್ ಅವರು ಪ್ರವೀಣ್ ಕುಟುಂಬಸ್ಥರ ಜೊತೆ ಮಾತುಕತೆ

ಸಮಗ್ರ ನ್ಯೂಸ್ : ದುಷ್ಕರ್ಮಿಗಳ ದಾಳಿಗೆ ಹತ್ಯೆಗೊಳಗಾದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಕನಸಿನ ಮನೆಯನ್ನು ನನಸು ಮಾಡುವ ನಿಟ್ಟಿನಲ್ಲಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪ್ರವೀಣ್ ನೆಟ್ಟಾರು ಅವರ ಕುಟುಂಬಸ್ಥರ ಜೊತೆ ಕುಂಜಾಡಿಯಲ್ಲಿ ಮಾತುಕತೆ ನಡೆಸಿದರು.

Ad Widget . Ad Widget .

ಮೊನ್ನೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಸರಕಾರಿ ಉದ್ಯೋಗ ನೀಡುವ ಆಜ್ಞೆ ಮಾಡಿದ್ದರು. ಇದೀಗ ಬಿಜೆಪಿ ರಾಜ್ಯಾಧ್ಯಕ್ಷರು ಪ್ರವೀಣ್ ಅವರ ಸ್ವಗೃಹ ನಿರ್ಮಾಣದ ಕನಸನ್ನು ನನಸಾಗಿಸಲು ಪ್ರವೀಣ್ ಅವರ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ.

Ad Widget . Ad Widget .

ನಳಿನ್ ತವರು ಮನೆಯಾದ ಸವಣೂರು ಸಮೀಪದ‌ ಕುಂಜಾಡಿ ಮನೆಯಲ್ಲಿ ಪ್ರವೀಣ್ ನೆಟ್ಟಾರು ಕುಟುಂಬಸ್ಥರನ್ನು ಭೇಟಿ ಯಾಗಿದ್ದಾರೆ. ಪ್ರವೀಣ್ ಪತ್ನಿಗೆ ಸರಕಾರಿ ಉದ್ಯೋಗ ನೀಡಲು ಸಹಕರಿಸಿದ ಸಂಸದರಿಗೆ ಪ್ರವೀಣ್ ಕುಟುಂಬ ಧನ್ಯವಾದ ಸಮರ್ಪಿಸಿದೆ.

ಈ ಸಂದರ್ಭದಲ್ಲಿ ಪ್ರವೀಣ್ ಅವರ ತಂದೆ ಶೇಖರ್ ಪೂಜಾರಿ,ರತ್ನಾವತಿ,ಪತ್ನಿ ನೂತನ,ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ,ಪ್ರಮುಖರಾದ ಆರ್.ಕೆ.ಭಟ್ ,ಸಹಜ್ ರೈ ಮೊದಲಾದವರಿದ್ದರು.

ಪ್ರವೀಣ್ ಕುಟುಂಬಕ್ಕೆ ಹೇಗೆಲ್ಲಾ ನೆರವು ನೀಡಬಹುದೋ, ಅದೆಲ್ಲವನ್ನೂ ಬಿಜೆಪಿ ಪಕ್ಷ ಮಾಡುತ್ತಿದೆ.

Leave a Comment

Your email address will not be published. Required fields are marked *