Ad Widget .

ಮುಂದಿನ ಮೂರು ತಿಂಗಳು ಮುಂದುವರಿಯುತ್ತೆ ವರುಣಾರ್ಭಟ| ಹವಾಮಾನ ತಜ್ಞರಿಂದ ಮಾಹಿತಿ

ಸಮಗ್ರ ನ್ಯೂಸ್: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಮೂರು ತಿಂಗಳು ಮಳೆಯಾಗಲಿದೆ. ಈ ಮಳೆ ಎದುರಿಸಲು ಜನ ಸಿದ್ಧರಾಗಬೇಕಿದೆ ಎಂದು ಹವಾಮಾನ ತಜ್ಞ ಪ್ರಸಾದ್ ಎಚ್ಚರಿಕೆ ನೀಡಿದರು.

Ad Widget . Ad Widget .

ಕಳೆದೊಂದು ವಾರದಿಂದ ಮಳೆಗೆ ತತ್ತರಿಸಿರುವ ಬೆಂಗಳೂರಲ್ಲಿ ಇನ್ನೂ 3 ತಿಂಗಳ ಕಾಲ ಮುಂದುವರಿಯಲಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ನವೆಂಬರ್ ವರೆಗೂ ಮಳೆಯಾಗಲಿದೆ. ಒಟ್ಟಾರೆಯಾಗಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಸೆ. 1 ರಿಂದ ಇದುವರೆಗೂ 211 ಎಂ.ಎಂ ಮಳೆಯಾಗಿದೆ.

Ad Widget . Ad Widget .

ಕರಾವಳಿಗೆ ಮುಂದಿನ 5 ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಕೆಲ ಜಿಲ್ಲೆಗಳಿಗೆ ಮುಂದಿನ 3 ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಗುಲ್ಬರ್ಗಾ, ಯಾದಗಿರಿ ಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *