ಸಮಗ್ರ ನ್ಯೂಸ್: ಮಂಗಳೂರು ದಸರಾ ಹಬ್ಬಕ್ಕೆ ಪೂರಕವಾಗುವಂತೆ ದ.ಕ ಜಿಲ್ಲೆಯಲ್ಲಿ ದಸರಾ ರಜೆಯನ್ನು ಪರಿಶೀಲನೆ ಮಾಡಿದ್ದು, ಸೆ.26 ರಿಂದ ಅ.10ರವರೆಗೆ ನೀಡಲು ತೀರ್ಮಾನಿಸಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವ ರಾಜ್ಯ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಥಳೀಯ ಮಟ್ಟದ ಮನವಿ ಮೇರೆಗೆ ದಸರಾ ರಜೆಯನ್ನು ದ.ಕ ಜಿಲ್ಲೆಗೆ ಪೂರಕವಾಗುವಂತೆ ಪರಿಶೀಲಿಸಲಾಗಿದ್ದು, ಪ್ರಕಟಣೆ ಹೊರಡಿಸುವಂತೆ ಸೂಚಿಸಿದ್ದಾರೆ. ಆದರೆ ಅ.2ರ ಗಾಂಧಿ ಜಯಂತಿಯನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಆಚರಿಸಲು ಸೂಚಿಸಲಾಗಿದೆ.
