ಕೊಲ್ಲೂರು ಕ್ಷೇತ್ರದ ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಮಹಿಳೆ ಮೃಹದೇಹ ಪತ್ತೆ

ಸಮಗ್ರ ನ್ಯೂಸ್: ಇಲ್ಲಿನ ಪ್ರಸಿದ್ಧ ಕ್ಷೇತ್ರ ಶ್ರೀ ಮೂಕಾಂಬಿಕಾ ದೇಗುಲಕ್ಕೆ ದರ್ಶನಕ್ಕೆ ಆಗಮಿಸಿದ್ದ ಮಹಿಳೆ ನದಿಯಲ್ಲಿ ಕೊಚ್ಚಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹಿಳೆಯ ಮೃತದೇಹ ಪತ್ತೆಯಾಗಿದೆ.

Ad Widget ... ..

ಸೆ. 10ರಂದು ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋಗಿದ್ದ ತಿರುವನಂತಪುರದ ಮುರುಗನ್‌ ಅವರ ಪತ್ನಿ ಶಾಂತಿ ಶೇಖರನ್‌(42) ಅವರ ಮೃತದೇಹ ಸೆ.

Ad Widget

11ರ ಸಂಜೆ ಪತ್ತೆಯಾಗಿದೆ.

ತಿರುವನಂತಪುರದಿಂದ ಕೊಲ್ಲೂರು ಕ್ಷೇತ್ರ ದರ್ಶನಕ್ಕೆ 14 ಮಂದಿಯ ತಂಡ ಆಗಮಿಸಿತ್ತು. ಅವರು ಸೌಪರ್ಣಿಕಾ ಸ್ನಾನಘಟ್ಟಕ್ಕೆ ತೆರಳಿ ತೀರ್ಥ ಸ್ನಾನಕ್ಕೆಂದು ನದಿಗೆ ಇಳಿದಿದ್ದರು.

ಶಾಂತಿ ಶೇಖರನ್‌ ಅವರು ಪುತ್ರ ಆದಿತ್ಯ ನದಿಯ ಸೆಳೆತಕ್ಕೆ ಒಳಗಾಗಿ ನೀರು ಪಾಲಾಗುತ್ತಿರುವುದನ್ನು ಕಂಡು ಆತನನ್ನು ರಕ್ಷಿಸಲು ನೀರಿಗೆ ಧುಮುಕಿದ್ದರು.

ಆಕೆಯ ಪತಿ ಮುರುಗನ್‌ ಕೂಡ ಪುತ್ರನನ್ನು ಕಾಪಾಡಲು ನೀರಿಗೆ ಹಾರಿದ್ದರು. ಆದಿತ್ಯ ಹಾಗೂ ಮುರುಗನ್‌ ಈಜಿ ದಡ ಸೇರಿದರೆ ಶಾಂತಿ ಶೇಖರನ್‌ ನೀರಿನ ಸೆಳೆತಕ್ಕೆ ಸಿಲುಕಿ ನದಿಯಲ್ಲಿ ಕೊಚ್ಚಿ ಹೋಗಿದ್ದರು.

ಅಗ್ನಿಶಾಮಕ ದಳ, ಕೊಲ್ಲೂರು ಪೊಲೀಸರು ಹಾಗೂ ಈಶ್ವರ ಮಲ್ಪೆ ತಂಡದವರು ಶೋಧ ಕಾರ್ಯ ನಡೆಸಿದ್ದು, ರವಿವಾರ ಸಂಜೆ ಸೌಪರ್ಣಿಕಾ ನದಿಯ 1 ಕಿ.ಮೀ. ದೂರ ವ್ಯಾಪ್ತಿಯಲ್ಲಿ ಮೃತದೇಹ ಪತ್ತೆಯಾಗಿದೆ.

Leave a Comment

Your email address will not be published. Required fields are marked *