ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ ನಲ್ಲಿ ತೀವ್ರ ಮಳೆಯಿಂದ ಬಿದಿರುತಳ ಸಮೀಪ ಹೆದ್ದಾರಿಯ ಬದಿ ಕುಸಿದಿದ್ದು ಆತಂಕ ಎದುರಾಗಿದೆ.
ಕೊಟ್ಟಿಗೆಹಾರದಿಂದ ಮಂಗಳೂರು ಹೋಗುವ ಮಾರ್ಗ ಮಧ್ಯೆ ಚಾರ್ಮಾಡಿ ಘಾಟ್ ನಲ್ಲಿ ವಿಪರೀತ ಮಳೆಯಿಂದ ಶನಿವಾರ ರಸ್ತೆಯ ಬದಿ ಕುಸಿದಿದೆ.

ಸಂಚಾರಕ್ಕೆ ಯಾವುದೇ ಅಡಚಣೆಯಾಗಿಲ್ಲ:
ರಸ್ತೆಯ ಬದಿಗೆ ತಡೆಗೋಡೆ ನಿರ್ಮಾಣವಾದ ಜಾಗದಲ್ಲೇ ಮಳೆಯ ನೀರು ನುಗ್ಗಿದ ಪರಿಣಾಮ ತಡೆಗೋಡೆ ಸಮೇತ ಮಣ್ಣು ಕುಸಿದಿದೆ. ರಾತ್ರಿಯ ಹೊತ್ತಲ್ಲಿ ಸಂಚಾರಕ್ಕೆ ಅನುಕೂಲ ಮಾಡಿ ಕೊಡಲಾಗಿದೆ. ಇನ್ನೂ ರಸ್ತೆ ಕುಸಿದ ಜಾಗದಲ್ಲಿ ಪ್ರಪಾತ ಇರುವುದರಿಂದ ವಾಹನ ಚಾಲಕರು ವಾಹನವನ್ನು ಬದಿಗೆ ತಂದರೆ ಆಪತ್ತು ಎದುರಾಗಬಹುದು ಹಾಗಾಗಿ ಎಚ್ಚರಿಕೆ ವಹಿಸುವುದು ಅಗತ್ಯ.

ಈ ಬಗ್ಗೆ ಸಂಬಂಧ ಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಪಾಯವನ್ನು ತಪ್ಪಿಸಬೇಕೆಂದು ಸಾರ್ವಜನಿಕರು, ವಾಹನ ಸವಾರರು ಆಗ್ರಹಿಸಿದ್ದಾರೆ.