ಹೆಸ್ಕಾಂ ನೌಕರ ನೇಣಿಗೆ ಶರಣು

ಸಮಗ್ರ ನ್ಯೂಸ್ : ಹೆಸ್ಕಾಂ ನೌಕರ ನೇಣಿಗೆ ಶರಣಾದ ಘಟನೆಯೊಂದು ಅಥಣಿ(ಬೆಳಗಾವಿ) ಪಟ್ಟಣದ ಹಲ್ಯಾಳ ಸರ್ಕಲ್‌ಗೆ ಹೊಂದಿಕೊಂಡಿರುವ ವಿದ್ಯುತ್ ವಿತರಣಾ ಕೇಂದ್ರದ ಆವರಣದಲ್ಲಿ ನಡೆದಿದೆ.

Ad Widget ... ..

ಮಂಜುನಾಥ ಮುತ್ತಗಿ (35) ಮೃತರೆಂದು ಗುರುತಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಅಥಣಿ ವಿದ್ಯುತ್ ಇಲಾಖೆಯಲ್ಲಿ ಇವರು ಕೆಲಸ ಮಾಡುತ್ತಿದ್ದರು.

Ad Widget

ವಿದ್ಯುತ್ ಕಂಬಗಳನ್ನು ನೆಡುವ ಟ್ರ್ಯಾಕ್ಟರ್‌ಗೆ ಬೈಕ್ ಸಹಾಯದಿಂದ ನೇಣು ಬಿಗಿದುಕೊಂಡಿದ್ದಾರೆಂದು ತಿಳಿದುಬಂದಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಥಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *