ಸಮಗ್ರ ನ್ಯೂಸ್: ರೋಚಕ ಹಣಾಹಣಿಯಲ್ಲಿ ಪಾಕ್ ವಿರುದ್ಧ 23 ರನ್ಗಳ ಗೆಲುವು ದಾಖಲಿಸಿರುವ ಶ್ರೀಲಂಕಾ 2022ನೇ ಸಾಲಿನ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಇದರ ಜೊತೆಗೆ ಬಲಿಷ್ಠ ಭಾರತ, ಪಾಕಿಸ್ತಾನ ತಂಡಗಳಿಗೂ ಸೋಲಿನ ರುಚಿ ತೋರಿಸಿದೆ. ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರ ರಕ್ಷಣೆಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಸಿಂಹಳೀಯರು ಅಂತಿಮವಾಗಿ ವಿಜೇತರಾಗಿ ಹೊರಹೊಮ್ಮಿದರು.
ಫೈನಲ್ನಲ್ಲಿ ವಿಜಯಿಯಾಗಿರುವ ಶ್ರೀಲಂಕಾ ಅಂದಾಜು ₹1,59,53,000 ಬಹುಮಾನ ಮೊತ್ತವನ್ನು ಜೇಬಿಗಿಳಿಸಿಕೊಂಡಿದೆ. ಇದರ ಜೊತೆಗೆ ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಬಹುಮಾನ ಮೊತ್ತ ಬೇರೆ ಸಿಗಲಿದೆ. ರನ್ನರ್ ಅಪ್ ಪಾಕಿಸ್ತಾನ ₹79,66,000 ಬಹುಮಾನವಾಗಿ ದೊರೆತಿದೆ. ಟೂರ್ನಮೆಂಟ್ ಉದ್ಧಕ್ಕೂ ಉತ್ತಮ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿರುವ ವನಿಂದು ಹಸರಂಗ 11.94 ಲಕ್ಷ ರೂಪಾಯಿ ಪಡೆದುಕೊಂಡಿದ್ದು, ಫೈನಲ್ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಭನುಕ ರಾಜಪಕ್ಸ 3.98 ಲಕ್ಷ ರೂ. ಸ್ವೀಕರಿಸಿದರು. ನಿನ್ನೆಯ ಪಂದ್ಯದಲ್ಲಿ ವನಿಂದು ಹಸರಂಗ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿ, ತಂಡಕ್ಕೆ ಮಹತ್ವದ ಕಾಣಿಕೆ ನೀಡಿದ್ದರು.