Ad Widget .

ಪ.ಪಂಗಡದ ಜಾಗದ ಅಕ್ರಮ‌ ಪರಭಾರೆ ಸರಿಪಡಿಸಲು ಅಂಬೇಡ್ಕರ್ ರಕ್ಷಣಾ ವೇದಿಕೆ ಮನವಿ

ಸಮಗ್ರ ನ್ಯೂಸ್: ಪರಿಶಿಷ್ಟ ಪಂಗಡಕ್ಕೆ ಸೇರಿದ ಜಾಗವನ್ನು ಮೇಲ್ವರ್ಗದವರು ಅಕ್ರಮವಾಗಿ ತಮ್ಮ ಹೆಸರಿಗೆ ರೆಕಾರ್ಡ್ ಮಾಡಿಕೊಂಡ ಹಿನ್ನಲೆ ಅದನ್ನು ಸರಿಪಡಿಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆಗೆ ಮನವಿ ಸಲ್ಲಿಸಲಾಯಿತು.

Ad Widget . Ad Widget .

ದೂರಿನಲ್ಲಿ ಏನಿದೆ?
ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ತಲ್ಲೂರು ಪರಿಶಿಷ್ಟ ಪಂಗಡದ ನಾರು ನಾಯ್ಕ ಬಿನ್ ಮಾಲಿಂಗ ನಾಯ್ಕ ಎಂಬವರ ಜಾಗದ ಸರ್ವೆ ನಂಬರ್ 109/2 ರಲ್ಲಿ4.65 ಎಕ್ರೆ ಜಾಗ ಈ ಜಾಗ ಡಿಸಿ ಡಿಆರ್ 1960 ರಲ್ಲಿ ನಾರು ನಾಯ್ಕ ಎಂಬವರಿಗೆ ಮಂಜುರಾಗಿರುತ್ತದೆ. ಈ ಜಾಗವನ್ನು ಭಾಸ್ಕರ ಬಿನ್ ಕುಕ್ಕಪ್ಪ ಗೌಡ ಬಾಳೆ ತೋಟ ಎಂಬವರು ಅಕ್ರಮವಾಗಿ ಭಾಸ್ಕರ ಬಾಳೆ ತೋಟ ಎಂಬವರ ಹೆಸರಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

Ad Widget . Ad Widget .

ಅದು ನನ್ನ ಅಜ್ಜನ ಜಾಗ, ಆ ಜಾಗವನ್ನು ಸಂಘಟನೆಯ ಹೋರಾಟದ ಮುಖಾಂತರ ನನಗೆ ಕೊಡಿಸಬೇಕೆಂದು ಚಂದ್ರಶೇಖರ್ ನಾಯ್ಕ ಎಂಬವರು ಅಂಬೇಡ್ಕರ್ ರಕ್ಷಣಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ಇದಕ್ಕೆ ಮನವಿ ದಿನಾಂಕ ಸೆ.09ರಂದು ಶನಿವಾರದಂದು ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಮತ್ತು ಜಿಲ್ಲಾ ಸಂಚಾಲಕರಾದ ಪರಮೇಶ್ವರ ಕೆಮ್ಮಿಂಜೆ ಇವರು ಸ್ಥಳದಲ್ಲಿ ಉಪಸ್ಥರಿದ್ದರು.

Leave a Comment

Your email address will not be published. Required fields are marked *