Ad Widget .

ಹದಿನಾಲ್ಕು ವರ್ಷದ ಬಾಲಕಿಯ ಮದ್ವೆಯಾದ 45ರ ಅಂಕಲ್| ಹಣದಾಸೆಗೆ ಮಗಳ ಬಾಳು ಬಲಿಕೊಟ್ಟ ಪೋಷಕರು

ಸಮಗ್ರ ನ್ಯೂಸ್: 14 ವರ್ಷದ ಬಾಲಕಿಯನ್ನ ಮದುವೆಯಾದ 45 ವರ್ಷದ ವ್ಯಕ್ತಿಯನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಈತನಿಗೆ ಈಗಾಗಲೇ ಮದುವೆಯಾಗಿ, 17 ವರ್ಷದ ಮಗ ಕೂಡ ಇದ್ದಾನೆ. ಆದರೂ ಬಡ ದಂಪತಿಯೊಬ್ಬರಿಗೆ ಹಣದಾಸೆ ತೋರಿಸಿ, ಅವರ ಅಪ್ರಾಪ್ತ ವಯಸ್ಸಿನ ಮಗಳನ್ನು ಬಲವಂತವಾಗಿ ಮದ್ವೆಯಾಗಿದ್ದಾನೆ.
ಗುರುಪ್ರಸಾದ್ (45) ಬಂಧಿತ.

Ad Widget . Ad Widget .

ಗುರುಪ್ರಸಾದ್​ಗೆ 18 ವರ್ಷಗಳ ಹಿಂದೆಯೇ ಮದ್ವೆ ಆಗಿದೆ. 17 ವರ್ಷ ವಯಸ್ಸಿನ ಮಗ ಕೂಡ ಇದ್ದಾನೆ. ಕೆಲ ವರ್ಷಗಳಿಂದ ಹೆಂಡತಿಯಿಂದ ದೂರವಾಗಿದ್ದ ಗುರುಪ್ರಸಾದ್​, ಅಪ್ರಾಪ್ತೆ ಮೇಲೆ ಕಣ್ಣು ಹಾಕಿದ್ದ. ಬಾಲಕಿಯ ಪೋಷಕರಿಗೆ ಹಣದಾಸೆ ತೋರಿಸಿ, ಸೆ.7ರಂದು ಬೆಂಗಳೂರು ಹೊರ ವಲಯಕ್ಕೆ ಕರೆದೊಯ್ದು ಬಾಲಕಿಯನ್ನು ಮದುವೆಯಾಗಿದ್ದ. ಬಾಲಕಿಗೆ ಇಷ್ಟವಿಲ್ಲದಿದ್ದರೂ ಮದುವೆಯಾಗಿದ್ದ.

ಈ ಬಗ್ಗೆ ಪರಿಚಯಸ್ಥರ ಬಳಿ ಬಾಲಕಿ ನೋವು ತೋಡಿಕೊಂಡು ಕಣ್ಣೀರಿಟ್ಟದ್ದಳು. ಆಕೆಯ ಕಷ್ಟಕ್ಕೆ ಮರುಗಿದ ಪರಿಚಯಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಗುರುಪ್ರಸಾದ್​ ಮತ್ತು ಬಾಲಕಿಯ ತಂದೆ-ತಾಯಿಯನ್ನೂ ಬಂಧಿಸಿದ್ದಾರೆ.

Leave a Comment

Your email address will not be published. Required fields are marked *