ಚಲಿಸುತ್ತಿರುವ ಬೈಕ್ ಮೇಲೆ ಮರದ ರೆಂಬೆ ಬಿದ್ದು, ಕಣ್ಣೆದುರಲ್ಲೇ ಪ್ರಾಣಬಿಟ್ಟ ಪತ್ನಿ

ಸಮಗ್ರ ನ್ಯೂಸ್: ಚಲಿಸುತ್ತಿರುವ ಬೈಕ್ ಮೇಲೆ ಮರ ಬಿದ್ದು, ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ.

Ad Widget ... ..

40 ವರ್ಷದ ರುಕ್ಮಿಣಿ ಶ್ರೀಶೈಲ್ ಮರನೂರ ಮೃತ ದುರ್ದೈವಿಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಕುಳಲಿ ಗ್ರಾಮದ ರುಕ್ಮಿಣಿ ಮರನೂರ ತಮ್ಮ ಪತಿ ಜೊತೆ ಬೈಕ್​ ನಲ್ಲಿ ತೆರಳುತ್ತಿದ್ದರು.

Ad Widget

ಈ ವೇಳೆ ಜೋರಾದ ಗಾಳಿಯಿಂದ ಆಲದ ಮರದ ಕೊಂಬೆ ಇವರ ಮೇಲೆ ಬಿದ್ದಿದೆ.

ಘಟನೆಯಲ್ಲಿ ಬೈಕ್​ ನಲ್ಲಿ ಹಿಂಬದಿ ಕುಳಿತಿದ್ದ ರುಕ್ಮಿಣಿ ಮೇಲೆ ಮರದ ರೆಂಬೆ ಬಿದ್ದಿದ್ದು, ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯ ಮುಂದೆ ಕುಳಿತು ಪತಿ ಕಣ್ಣೀರುತ್ತಿದ್ದ ದೃಶ್ಯ ಮನಕಲಕುವಂತಿತ್ತು.

Leave a Comment

Your email address will not be published. Required fields are marked *