Ad Widget .

ಪ್ರವೀಣ್ ಹತ್ಯೆ ತಿರುಚಲು ಎನ್ಐಎಗೆ ಅಸೈನ್ ಮೆಂಟ್ ನೀಡಿದ ಸರ್ಕಾರ – ಪಿಎಫ್ಐ ಆಕ್ರೋಶ

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಪಿ.ಎಫ್.ಐ ಪ್ರಮುಖರ ಮೇಲೆ ಎನ್.ಐ.ಎ ದಾಳಿಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ಎನ್‌ಐಎ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ.

Ad Widget . Ad Widget .

ಮಂಗಳೂರಿನ ಪಿಎಫ್‌ಐ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎ.ಕೆ ಅಶ್ರಫ್, ಪ್ರವೀಣ್ ನೆಟ್ಟಾರ್ ಕೊಲೆ ಕೇಸ್ ನೆಪದಲ್ಲಿ ಬಿಜೆಪಿ ‌ಎನ್‌ಐಎ ದುರ್ಬಳಕೆ ಮಾಡುತ್ತಿದೆ. ಪಿಎಫ್ ಐ ನಾಯಕರು ಎನ್ನುವ ಕಾರಣಕ್ಕೆ ಮುಸ್ಲಿಂ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಶಿವಮೊಗ್ಗದ ಹರ್ಷ ‌ಮತ್ತು ಪ್ರವೀಣ್ ಕೇಸ್ ಎನ್‌ಐಎಗೆ ವಹಿಸಲಾಗಿದೆ. ಆದರೆ ಇದರಲ್ಲಿ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಬೆಳಗಾವಿಯ ಅರ್ಬಾಝ್, ಶಮೀರ್ ಕೇಸ್ ನಲ್ಲಿ ಸಂಘಪರಿವಾರ ಇದೆ. ಆದರೆ ಇದನ್ನ ಯಾಕೆ ಸರಕಾರ ಎನ್‌ಐಎಗೆ ವಹಿಸಿಲ್ಲ. ಬೆಳ್ಳಾರೆಯ ಮಸೂದ್ ಮತ್ತು ಸುರತ್ಕಲ್ ಫಾಜಿಲ್ ಕೇಸ್ ಯಾಕೆ ಎನ್‌ಐಎಗೆ ವಹಿಸಿಲ್ಲ? ಎಂದು ಎ.ಕೆ ಅಶ್ರಫ್ ಪ್ರಶ್ನಿಸಿದ್ದಾರೆ.

Ad Widget . Ad Widget .

ರಾಜ್ಯದಲ್ಲಿ ‌ನಡೆದ ಮುಸ್ಲಿಂ ಯುವಕರ ಹತ್ಯೆಯಲ್ಲಿ ಸಂಘ ಪರಿವಾರದ ಕೈವಾಡ ಇದೆ. ಆದರೆ ಮುಸ್ಲಿಂ ಯುವಕರು ಆರೋಪಿಗಳಾಗಿರುವ ಕೇಸ್ ಗಳನ್ನ ಮಾತ್ರ ಎನ್‌ಐಎಗೆ ವಹಿಸಲಾಗುತ್ತಿದೆ. ಇದು ಬಿಜೆಪಿ ಸರ್ಕಾರ ಎನ್‌ಐಎ ಎಂಬ ತನಿಖಾ ಸಂಸ್ಥೆಯನ್ನ‌ ದುರ್ಬಳಕೆ ‌ಮಾಡಲಾಗುತ್ತಿದೆ. ನಿನ್ನೆ 30ಕ್ಕೂ ಅಧಿಕ ಕಡೆ ಎನ್‌ಐಎ ದಾಳಿ‌ ನಡೆಸಿದೆ. ಬಿಜೆಪಿ ವಿರುದ್ದ ಅವರ ಕಾರ್ಯಕರ್ತರ ಅಸಮಾಧಾನ ಸರಿ ಪಡಿಸಲು ಎನ್‌ಐಎಗೆ ವಹಿಸಲಾಗಿದೆ.

ಕೆಲ ಪಿಎಫ್ ಐ ಕಾರ್ಯಕರ್ತರು ಮತ್ತು ನಾಯಕರ ಮನೆಗಳ ಜೊತೆ ಮುಸ್ಲಿಂ ಯುವಕರ ಮನೆಗಳಿಗೆ ದಾಳಿ‌ ನಡೆಸಲಾಗಿದೆ. ಪಿಎಫ್‌ಐ ಹೆಸರೇಳಿ ಮುಸ್ಲಿಮರನ್ನು ದಮನಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಎ.ಕೆ ಅಶ್ರಫ್ ಆರೋಪಿಸಿದ್ದಾರೆ.

ವಿಧಾನಸಭಾ ಚುನಾವಣೆ ಮುಂದಿಟ್ಟು ಈ ಕೆಲಸ ಮಾಡಲಾಗಿದೆ. ಪಿಎಫ್ ಐ ಟಾರ್ಗೆಟ್ ‌ಮಾಡಿ‌ ಹಾಗೂ ಬಿಜೆಪಿ ಕಾರ್ಯಕರ್ತರ ಸಮಾಧಾನ ಪಡಿಸಲು ಈ ದಾಳಿ ಮಾಡಲಾಗಿದೆ. ಬಿಜೆಪಿ ಸರ್ಕಾರ ವೈಫಲ್ಯತೆ‌ ಮುಚ್ಚಿ ಹಾಕಲು ಈ ಕೆಲಸ ‌ಮಾಡಿದೆ. ಪಿಎಫ್ ಐ ವಿರುದ್ದ ಎನ್‌ಐಎ ಮತ್ತು‌ ಇಡಿ ಛೂ ಬಿಟ್ಟು ಕಿರುಕುಳ ಕೊಡಲಾಗುತ್ತಿದೆ. ಪ್ರವೀಣ್ ‌ನೆಟ್ಟಾರು ಪ್ರಕರಣ ಸ್ಥಳೀಯ ಮಟ್ಟದ ಪ್ರತೀಕಾರದ ಪ್ರಕರಣ. ಸ್ಥಳೀಯ ಪೊಲೀಸರೇ ಇದರ ಆರೋಪಿಗಳನ್ನ ಬಂಧಿಸಿದ್ದಾರೆ. ಈ ಘಟನೆಯನ್ನ ಭಯೋತ್ಪಾದನೆ ಘಟನೆ ಅಂತ ತಿರುಚಲು ಎನ್‌ಐಎಗೆ ಅಸೈನ್ ಮೆಂಟ್ ಕೊಡಲಾಗಿದೆ. ಎನ್‌ಐಎ ದಾಳಿ ವೇಳೆ ಭಯೋತ್ಪಾದಕನ ಹಿಡಿಯೋ ರೀತಿ ವಾತಾವರಣ ಸೃಷ್ಟಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

Leave a Comment

Your email address will not be published. Required fields are marked *