ಮಂಗಳೂರಿನ‌ ಬಿಇಒ ಕಚೇರಿ ಅಧಿಕಾರಿ ಮಡಿಕೇರಿ ಲಾಡ್ಜ್ ನಲ್ಲಿ ನೇಣಿಗೆ ಶರಣು

ಮಂಗಳೂರು : ಇಲ್ಲಿನ ಅಧಿಕಾರಿ ಮಡಿಕೇರಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಲಾಡ್ಜ್‌ ಒಂದರಲ್ಲಿ ತಂಗಿದ್ದ ಶಿವಾನಂದ ಎಂಬ ಸರ್ಕಾರಿ ಅಧಿಕಾರಿ ಲಾಡ್ಜ್‌ ನ ಕೊಠಡಿಯ ಫ್ಯಾನ್‌ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

Ad Widget ... ..

ಆತ್ಮಹತ್ಯೆ ಮಾಡಿಕೊಂಡ ಶಿವಾನಂದ ಅವರು ಮಂಗಳೂರು ದಕ್ಷಿಣ ವಿಭಾಗದ ಬಿಇಒ ಕಚೇರಿ ಅಧಿಕಾರಿಯಾಗಿದ್ದು, ಶಿವನಾಂದ ಅವರು ಬಜ್ಪೆ ಮೂಲದವರಾಗಿದ್ದು, ಮಡಿಕೇರಿಗೆ ಯಾಕೆ ಬಂದಿದ್ದರು ಎನ್ನುವ ಯಾವುದೇ ವಿಚಾರ ಇನ್ನೂ ತಿಳಿದು ಬಂದಿಲ್ಲ.

Ad Widget

ಮಡಿಕೇರಿ ನಗರ ಠಾಣೆ ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

Leave a Comment

Your email address will not be published. Required fields are marked *