Ad Widget .

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಬಾಲಿವುಡ್ ಖ್ಯಾತ ನಟಿ ರಿಚಾ ಚಡ್ಡಾ ಮತ್ತು ನಟ ಅಲಿ ಫಜಲ್

ಸಮಗ್ರ ನ್ಯೂಸ್:  ಬಾಲಿವುಡ್ ನ ಖ್ಯಾತ ನಟಿ ರಿಚಾ ಚಡ್ಡಾ ಹಾಗೂ ನಟ ಅಲಿ ಫಜಲ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಜೋಡಿಗಳ ವಿವಾಹಕ್ಕೆ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ.

Ad Widget . Ad Widget .

2020ರಲ್ಲಿ ರಿಚಾ ಚಡ್ಡಾ ಮತ್ತು ಅಲಿ ಫಜಲ್ ತಾವಿಬ್ಬರು ಮದುವೆ ಆಗುವುದಾಗಿ ಅಧಿಕೃತವಾಗಿ ಮಾಹಿತಿ ತಿಳಿಸಿದ್ದರು.

Ad Widget . Ad Widget .

ಆದರೆ ಕೊರೊನಾ ಕಾರಣದಿಂದ ಮದುವೆಯನ್ನು ಮುಂದೂಡಲಾಗಿತ್ತು. ಇದೀಗ ಸೂಕ್ತ ಸಮಯ ಬಂದಿದ್ದು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದೇ ಸೆಪ್ಟೆಂಬರ್ ಕೊನೆಯಲ್ಲಿ ರಿಚಾ ಹಾಗೂ ಅಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಈಗಾಗಲೇ ರಿಚಾ ಹಾಗೂ ಅಲಿ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿದ್ದಾರೆ. ಸದ್ಯ ಮದುವೆಯ ತಯಾರಿಯಲ್ಲಿ ರಿಚಾ ಮತ್ತು ಅಲಿ ಫಜಲ್ ಬ್ಯುಸಿಯಾಗಿದ್ದಾರೆ.

5 ದಿನಗಳು ಮದುವೆಯ ಶಾಸ್ತ್ರಗಳು ನಡೆಯಲಿದೆ. ಮದುವೆ ಸಮಾರಂಭ, ಎರಡು ಅದ್ದೂರಿ ಆರತಕ್ಷತೆ, ಸಂಗೀತ, ಮತ್ತು ಮಹೆಂದಿ ಕಾರ್ಯಕ್ರಮ ಮುಂಬೈನಲ್ಲಿ ಜರುಗಲಿದೆ.

Leave a Comment

Your email address will not be published. Required fields are marked *