Ad Widget .

ಇಂದು ಪ್ರೇರಣಾ ಅವರ ಅದ್ದೂರಿ ಸೀಮಂತ ಕಾರ್ಯಕ್ರಮ

ಬೆಂಗಳೂರು: ಧ್ರುವ ಸರ್ಜಾ ಹಾಗೂ ಪ್ರೇರಣಾ ಪೋಷಕರಾಗುತ್ತಿದ್ದಾರೆ. ಈ ವಿಚಾರವನ್ನು ಧ್ರುವ ಸರ್ಜಾ ಇತ್ತಿಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಇಂದು ಸೀಮಂತ ಕಾರ್ಯ ಅದ್ದೂರಿಯಾಗಿ ನಡೆದಿದೆ.

Ad Widget . Ad Widget .

ಖಾಸಗಿ ಹೋಟೆಲ್ ನಲ್ಲಿ ನಡೆದ ಈ ಸೀಮಂತ ಕಾರ್ಯಕ್ರಮಕ್ಕೆ ಮನೆಯ ಹಿರಿಯರೆಲ್ಲಾ ಸೇರಿದ್ದರು.

Ad Widget . Ad Widget .

ಅರ್ಜುನ್ ಸರ್ಜಾ ಕುಟುಂಬವು ಆಗಮಿಸಿತ್ತು. ಆದರೆ ಈ ವೇಳೆ ಚಿರುನನ್ನು ನೆನೆದು ಕೊಂಚ ಭಾವುಕರಾಗಿದ್ದಾರೆ. ಯಾಕೆಂದರೆ ತಮ್ಮನ ಖುಷಿಯಲ್ಲಿ ಅಣ್ಣ ಸಂಭ್ರಮ ಪಡುತ್ತಿದ್ದರು. ಅದರಲ್ಲೂ ಧ್ರುವ ತಂದೆಯಾಗುತ್ತಿರುವ ವಿಚಾರವೇ ಚಿರುಗೆ ಹಬ್ಬದಂತೆ ಆಗುತ್ತಿತ್ತು.

ಈ ಹಿಂದೆ ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿಯೇ ಮೇಘನಾ ಸೀಮಂತವನ್ನು ಧ್ರುವ ಅದ್ದೂರಿಯಾಗಿ ಮಾಡಿದ್ದರು. ರಾಯನ್ ರಾಜ್ ಸರ್ಜಾ ಕುಟುಂಬದಲ್ಲಿ ಖುಷಿ ತಂದಿದ್ದು, ಈಗ ಇನ್ನೊಂದು ಮಗು ಸರ್ಜಾ ಕುಟುಂಬಕ್ಕೆ ಸಂತಸ ತಂದು ಕೊಡಲಿದೆ.

Leave a Comment

Your email address will not be published. Required fields are marked *