ಸಮಗ್ರ ನ್ಯೂಸ್: ಕೇಂದ್ರದ ಬಿಜೆಪಿ ಸರಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಬಿಜೆಪಿ ಈ ವ್ಯವಸ್ಥೆಯನ್ನು ನಿಲ್ಲಿಸಬೇಕು ಎಂದು ಎಸ್‌ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ. ಸುಮಾರು 10 ಗಂಟೆಗಳ ಕಾಲ ಎನ್‌ಐಎ ತಂಡದ ತೀವ್ರ ವಿಚಾರಣೆಯ ಬಳಿಕ ಅವರು ಮಾಧ್ಯಮದ ಜೊತೆ ಮಾತನಾಡಿದರು.
ಕೆಲವೊಂದು ಸುಳ್ಳು ಹಾಗೂ ಕಪೋಲ ಕಲ್ಪಿತ ಪ್ರಕರಣವನ್ನು ಮುಂದಿಟ್ಟುಕೊಂಡು, ಈ ರೀತಿಯಾಗಿ ದಾಳಿ ನಡೆಸಿ, ಸಂಘಟನೆ, ಅದರ ಕಾರ್ಯಕರ್ತರನ್ನು ವಿಚಲಿತರನ್ನಾಗಿ ಮಾಡುವ ತಂತ್ರವಾಗಿದೆ ಇದು ಎಂದು ಅವರು ಹೇಳಿದರು.
ಪಕ್ಷವು ನನ್ನನ್ನು ಬಿಹಾರದ ಉಸ್ತುವಾರಿಯನ್ನಾಗಿ ನಿಯೋಜಿಸಿದ್ದು, ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕ್ರಮ ಸಲುವಾಗಿ
ಬಿಹಾರಕ್ಕೆ ಹೋಗಿ ಬರುತ್ತಿದ್ದೆ. ಈ ಸಲುವಾಗಿಯೂ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದವರು ಹೇಳಿದರು.
ಬೆಳಗ್ಗೆ ಐದು ಗಂಟೆ ಸುಮಾರಿಗೆ ಆಗಮಿಸಿದ ಎನ್‌ಐಎ ತಂಡ ವಿಚಾರಣೆ ನಡೆಸಿದೆ. ಕೆಲವೊಂದು ವಿಚಾರವಾಗಿ ಪ್ರಶ್ನೆಗಳನ್ನು ಕೇಳಿದ್ದು, ಎಲ್ಲದಕ್ಕೂ ಉತ್ತರಿಸಿದ್ದೇನೆ ಎಂದರು. ನನ್ನ ಮತ್ತು ಪತ್ನಿಯ ಮೊಬೈಲ್ ಮತ್ತು ಕೆಲ ದಾಖಲೆಗಳನ್ನು ಎನ್ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.