Ad Widget .

ಪ್ರವೀಣ್‌ ನೆಟ್ಟಾರ್‌ ಹತ್ಯೆ ಪ್ರಕರಣ| ರಾಜ್ಯದ 33 ಸ್ಥಳಗಳಲ್ಲಿ NIA ಶೋಧ ಕಾರ್ಯಾಚರಣೆ; ಸ್ಪೋಟಕ ಮಾಹಿತಿ ಬಯಲು

ಸಮಗ್ರ ನ್ಯೂಸ್: ಜು 26 ರಂದು ರಾತ್ರಿ ಬೆಳ್ಳಾರೆಯಲ್ಲಿ ಬರ್ಬರವಾಗಿ ಹತ್ಯೆಯಾದ ಬಿಜೆಪಿ ಯುವ ನೇತಾರ ಪ್ರವೀಣ್‌ ನೆಟ್ಟಾರ್‌ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳವು (NIA) ಚುರುಕುಗೊಳಿಸಿದೆ. ಸೆ 6 ರಂದು ರಾಜ್ಯದ ಮೂರು ಜಿಲ್ಲೆಗಳ 33 ಸ್ಥಳಗಳಲ್ಲಿ ಅದು ಶೋಧ ಕಾರ್ಯಚರಣೆ ನಡೆಸಿ ಹಲವು ಮಹತ್ವದ ದಾಖಲೆ ಹಾಗೂ ವಸ್ತುಗಳನ್ನು ವಶಕ್ಕೆ ಪಡೆದಿದೆ.

Ad Widget . Ad Widget .

ಹತ್ಯೆಯ ಕಾರಣ ಬಯಲು :
ಈ ಬಗೆಗಿನ ಮಾಹಿತಿಯನ್ನು ಎನ್‌ ಐಎಯು ಸೆ 6 ರಂದು ರಾತ್ರಿ ಹಂಚಿಕೊಂಡಿದೆ. ಈ ವೇಳೆ ಅದು ಹಲವು ಅಘಾತಕಾರಿ ವಿಷಯಗಳನ್ನು ಹೊರ ಹಾಕಿದೆ. ಕೃತ್ಯವನ್ನು ಎಸಗಿದ ಆರೋಪಿಗಳೆಲ್ಲರೂ ಪಾಪ್ಯುಲರ್‌ ಫ್ರಂಟ್‌ ಅಪ್ ಇಂಡಿಯಾ‌ ಸಂಘಟನೆಯ ಸಕ್ರಿಯ ಕಾರ್ಯಕರ್ತರು ಎಂದು ತಿಳಿಸಿದೆ. ಸಮಾಜದ ಒಂದು ವರ್ಗದ ಜನರಲ್ಲಿ ಭಯವನ್ನು ಹುಟ್ಟಿಸುವ ಉದ್ದೇಶದಿಂದ ದೊಡ್ಡ ಷಡ್ಯಂತ್ರದ ಭಾಗವಾಗಿ ಈ ಹತ್ಯೆ ಮಾಡಲಾಗಿದೆ ಎಂಬ ಸ್ಪೋಟಕ ಮಾಹಿತಿಯನ್ನು ಇದು ಹೊರ ಹಾಕಿದೆ. ಆರೋಪಿಗಳು ಹಾಗೂ ಶಂಕಿತರ ಮನೆಯ ಶೋಧದ ವೇಳೆ ಮದ್ದುಗುಂಡುಗಳು, ಸುಧಾರಿತ ಶಸ್ತ್ರಗಳು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.

Ad Widget . Ad Widget .

ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರ್‌ ಹತ್ಯೆಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳವು ಕರ್ನಾಟಕ ರಾಜ್ಯದ ಮೂರು ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಸೆ.6 ರಂದು ಶೋಧ ಕಾರ್ಯಾಚರಣೆ ನಡೆಸಿತು. ಆರಂಭದಲ್ಲಿ ದಕ್ಷಿಣ ಜಿಲ್ಲೆಯ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಜು.27 ರಂದು ಈ ಪ್ರಕರಣದ FIR ದಾಖಲು ಮಾಡಲಾಗಿತ್ತು. ಆ.4 ರಂದು ಮತ್ತೆ ಇದೇ ಪ್ರಕರಣವನ್ನು NIAಯು RC-36/2022/NIA/DLI ರಂತೆ ಮರು ದಾಖಲು ಮಾಡಿಕೊಂಡಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ NIA ಹಲವು ಆಯಾಮಗಳಲ್ಲಿ ತನಿಕೆ ನಡೆಸಿತ್ತು.

ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ. 6 ರಂದು ಮೈಸೂರು, ಕೊಡಗು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 33 ಸ್ಥಳಗಳಲ್ಲಿ NIAಯು ಶೋಧ ಕಾರ್ಯಚರಣೆ ನಡೆಸಿದೆ. ಕಾರ್ಯಚರಣೆಯನ್ನು, ಆರೋಪಿ ಗಳಿಗೆ ಹಾಗೂ ಶಂಕಿತರಿಗೆ ಸೇರಿದ ಸ್ಥಳಗಳಲ್ಲಿ ನಡೆಸಲಾಗಿತ್ತು. ಈ ವೇಳೆ ಡಿಜಿಟಲ್‌ ಸಾಧನಗಳು, ಬಳಸಿದ ಮದ್ದುಗುಂಡುಗಳು, ಸುಧಾರಿತ ಶಸ್ತ್ರಗಳು, ನಗದು, ಶಂಕಾಸ್ಪದ ದಾಖಲೆಗಳು, ಕರಪತ್ರಗಳು ಹಾಗೂ ಸಾಹಿತ್ಯಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆಯು ಮುಂದುವರಿದಿದೆ.

Leave a Comment

Your email address will not be published. Required fields are marked *