ಇಂದು(ಸೆ.7) NEET ಫಲಿತಾಂಶ ಪ್ರಕಟ

ಸಮಗ್ರ ನ್ಯೂಸ್: ವೈದ್ಯಕೀಯ ಮತ್ತು ದಂತ ವೈದ್ಯಕೀಯ, ಆಯುಷ್ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಲಾಗಿದ್ದ ನೀಟ್ ಫಲಿತಾಂಶ ಇಂದು(ಸೆ.7) ಪ್ರಕಟವಾಗಲಿದೆ

Ad Widget ... ..

ವಿದ್ಯಾರ್ಥಿಗಳು ಫಲಿತಾಂಶವನ್ನು ವೆಬ್ ಸೈಟ್ ನಲ್ಲಿ ವೀಕ್ಷಿಸಬಹುದಾಗಿದ್ದು, ಇದಕ್ಕಾಗಿ neet.nta.nic.in ಗೆ ಭೇಟಿ ನೀಡಬೇಕಾಗುತ್ತದೆ. ತಮ್ಮ ಲಾಗಿನ್ ಐಡಿ, ಜನ್ಮ ದಿನಾಂಕ ಹಾಗೂ ನೋಂದಣಿ ಸಂಖ್ಯೆ ನಮೂದಿಸಿ ಫಲಿತಾಂಶ ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ.

Ad Widget

ಜುಲೈ 17ರಂದು ನಡೆದಿದ್ದ ನೀಟ್ ಪರೀಕ್ಷೆಯನ್ನು ಬರೆಯಲು 18 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಅದರ ಫಲಿತಾಂಶ ಇಂದು ಪ್ರಕಟವಾಗಲಿದೆ.

ತಾತ್ಕಾಲಿಕ ಕೀ ಉತ್ತರಗಳನ್ನು ಕಳೆದ ವಾರ ಪ್ರಕಟಿಸಲಾಗಿದೆ. ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 2 ರವರೆಗೆ ಉತ್ತರದ ಕೀಗೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಲು ಅನುಮತಿಸಲಾಗಿತ್ತು.

ನಿರೀಕ್ಷಿತ ಕಟ್ ಆಫ್ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 50 ಪ್ರತಿಶತ, PH ಅಭ್ಯರ್ಥಿಗಳಿಗೆ 45 ಪ್ರತಿಶತ ಮತ್ತು SC/ST/OBC ವರ್ಗದ ಅಭ್ಯರ್ಥಿಗಳಿಗೆ 40 ಪ್ರತಿಶತ. ಫಲಿತಾಂಶ ಪ್ರಕಟವಾದ ನಂತರ ಕಟ್ ಆಫ್ ಅಂಕಗಳನ್ನು ಬಿಡುಗಡೆ ಮಾಡಲಾಗುವುದು

Leave a Comment

Your email address will not be published. Required fields are marked *