Ad Widget .

ರಾಜೀವ್ ಗಾಂಧಿ ಅವರ ಸ್ಮಾರಕದಲ್ಲಿ ಸಸಿ ನೆಟ್ಟು ಪುಷ್ಪ ನಮನ ಸಲ್ಲಿಸಿದ ರಾಹುಲ್ ಗಾಂಧಿ

ಚೆನ್ನೈ: ಶ್ರೀಪೆರಂಬದೂರಿನಲ್ಲಿರುವ ತಮ್ಮ ತಂದೆ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುಷ್ಪ ನಮನ ಸಲ್ಲಿಸಿದರು.

Ad Widget . Ad Widget .

ಜೋಡೋ ಭಾರತ್‌ ಯಾತ್ರೆ ಚಾಲನೆ ಹಿನ್ನೆಲೆ ನಿನ್ನೆ ರಾತ್ರಿ ಇಲ್ಲಿಗೆ ಆಗಮಿಸಿದ ರಾಹುಲ್ ಗಾಂಧಿ, ಮಾಜಿ ಪ್ರಧಾನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

Ad Widget . Ad Widget .

ಮೊದಲು ರಾಜೀವ ಗಾಂಧಿ ಸ್ಮಾರಕ ಸ್ಥಳದಲ್ಲಿ ರಾಹುಲ್ ಸಸಿ ನೆಟ್ಟರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ತಮಿಳುನಾಡು ಕಾಂಗ್ರೆಸ್ ಕಮಿಟಿ ಮುಖ್ಯಸ್ಥ ಕೆ.ಎಸ್.ಅಳಗಿರಿ ಮತ್ತು ಪಕ್ಷದ ಇತರ ಹಿರಿಯ ನಾಯಕರು ಜೊತೆಗಿದ್ದರು.

ಮೇ 21, 1991 ರಂದು ಶ್ರೀಪೆರಂಬದೂರಿನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಲಾಗಿತ್ತು.

ರಾಹುಲ್ ಗಾಂಧಿ ಕನ್ಯಾಕುಮಾರಿ ಜಿಲ್ಲೆಗೆ ತೆರಳಲಿದ್ದು, ಮಾಜಿ ಸಿಎಂ ಕಾಮರಾಜ್ ಮತ್ತು ಗಾಂಧಿ ಮಂಟಪ ಹಾಗೂ ತಿರುವಳ್ಳುವರ್ ಮತ್ತು ಸ್ವಾಮಿ ವಿವೇಕಾನಂದರ ಅವಳಿ ಸ್ಮಾರಕಗಳಿಗೆ ಭೇಟಿ ನೀಡಲಿದ್ದಾರೆ. ನಂತರ ಅವರು 12 ರಾಜ್ಯಗಳಲ್ಲಿ ಸಂಚರಿಸಲಿರುವ 3,500 ಕಿಮೀ ಉದ್ದದ ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಲಿದ್ದಾರೆ.

Leave a Comment

Your email address will not be published. Required fields are marked *