ಬುದ್ದಿಮಾಂದ್ಯೆ ಮೇಲೆ ಅತ್ಯಾಚಾರಕ್ಕೆ ಯತ್ನ; ವೃದ್ಧನ ಬಂಧನ

ಸಮಗ್ರ ನ್ಯೂಸ್: ಬುದ್ದಿಮಾಂದ್ಯ ಯುವತಿಯ ಮೇಲೆ‌ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ವೃದ್ಧರೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಎನ್.ಆರ್ ಪುರದಲ್ಲಿ ನಡೆದಿದೆ.

Ad Widget ... ..

ಇಲ್ಲಿನ ಖಾಸಗಿ ಶಾಲೆಯ ಬಸ್ ಚಾಲಕ ತಾಲ್ಲೂಕಿನ ಮಲ್ಲಂದೂರು ಗ್ರಾಮ ನಿವಾಸಿ ಸದಾಶಿವ ಶೆಟ್ಟಿ(66) ಬಂಧಿತ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ.

Ad Widget

ಸದಾಶಿವಶೆಟ್ಟಿ ಪಟ್ಟಣದ ವ್ಯಾಪ್ತಿಯ 20 ವರ್ಷದ ಬುದ್ಧಿಮಾಂದ್ಯ ಯುವತಿ ಮೇಲೆ ಮಂಗಳವಾರ ರಾತ್ರಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಯುವತಿ ಸಹೋದರಿ ನೀಡಿದ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Comment

Your email address will not be published. Required fields are marked *