ಸಮಗ್ರ ನ್ಯೂಸ್ : ಕೆಲವು ಶಾಲೆಗಳಲ್ಲಿ ಶಿಕ್ಷಕರು ಮಾಹಿತಿ ನೀಡದೆ ಗೈರು ಹಾಜರಾಗುತ್ತಿರುವುದು, ಅಲ್ಲದೆ ತಡವಾಗಿ ಶಾಲೆಗೆ ಬರುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆ ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ.
ಶಿಕ್ಷಕರಿಗೆ ಬಯೋಮೆಟ್ರಿಕ್ ಹಾಜರಿ ಕಡ್ಡಾಯಗೊಳಿಸಲಾಗಿದ್ದು, ಜೊತೆಗೆ ಶಾಲೆ ಆರಂಭಕ್ಕೂ 15 ನಿಮಿಷ ಮೊದಲು ಹಾಜರಿರುವಂತೆ ಸೂಚಿಸಲಾಗಿದೆ.
ಜೊತೆಗೆ ರಜೆ ಮೇಲೆ ತೆರಳುವಾಗ ಮೇಲಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳುವುದು ಅಗತ್ಯವಾಗಿದೆ.
ಶಾಲೆಗಳಲ್ಲಿರುವ ಬಯೋಮೆಟ್ರಿಕ್ ಯಂತ್ರ ಸುಸ್ಥಿತಿಯಲ್ಲಿರುವ ಕುರಿತು ಶಾಲಾ ಮುಖ್ಯಸ್ಥರು ಮತ್ತು ಸ್ಥಳೀಯ ಅಧಿಕಾರಿಗಳು ಪರಿಶೀಲಿಸುತ್ತಿರಬೇಕು ಎಂದು ತಿಳಿಸಲಾಗಿದ್ದು, ಜೊತೆಗೆ ಪ್ರತಿ ತಿಂಗಳ 25ನೇ ತಾರೀಕಿನೊಳಗೆ ಚೆಕ್ ಇನ್ ಮತ್ತು ಚೆಕ್ ಔಟ್ ದಾಖಲೆಗಳನ್ನು ಪಡೆದು ಅದಕ್ಕೆ ಅನುಗುಣವಾಗಿ ವೇತನ ಪಾವತಿಸಲು ಸೂಚಿಸಲಾಗಿದೆ.