Ad Widget .

ಕೌಟುಂಬಿಕ ಕಲಹ; ತಂದೆ ತಲೆಗೆ ಕಟ್ಟಿಗೆಯಿಂದ ಹೊಡೆದ ಮಗ

ಸಮಗ್ರ ನ್ಯೂಸ್: ಕೌಟುಂಬಿಕ ಕಲಹದಿಂದ ಸಿಟ್ಟಿಗೆದ್ದ ಮಗನೇ ತಂದೆ ತಲೆಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಕೂಡ್ಲಿಗಿ ತಾಲೂಕಿನ ಕುದುರೆಡವು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

Ad Widget . Ad Widget .

ತಿಪ್ಪೇರುದ್ರಪ್ಪ (70) ಕೊಲೆಯಾದ ವ್ಯಕ್ತಿ. ಕೃತ್ಯವೆಸಗಿದ ಮಗ ನಾಗರಾಜ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಿಪ್ಪೇರುದ್ರಪ್ಪ ಹಾಗೂ ನಾಗರಾಜ್ ನಡುವೆ ಕೌಟುಂಬಿಕ ಕಲಹವಿತ್ತು. ಭಾನುವಾರ ರಾತ್ರಿ ನಾಗರಾಜ್‌ ಊಟಕ್ಕೆ ಮನೆಗೆ ಬಂದಾಗ ತಂದೆ ಅವಹೇಳನ ಮಾಡಿದ್ದಾರೆ.

Ad Widget . Ad Widget .

ಇದರಿಂದ ಕುಪಿತಗೊಂಡ ನಾಗರಾಜ್‌ ಕಟ್ಟಿಗೆಯಿಂದ ತಂದೆಯ ಹಣೆ, ತಲೆಗೆ ಬಲವಾಗಿ ಹೊಡೆದಿದ್ದಾನೆ. ಗಂಭೀರ ಗಾಯಗೊಂಡಿದ್ದ ತಿಪ್ಪೇರುದ್ರಪ್ಪ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಗುಡೇಕೋಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನಾ ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್​ಪಿ, ಸಿಪಿಐ ಭೇಟಿ ನೀಡಿ ಪರಿಶೀಲಿಸಿದರು.

ಗುಡೇಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *