ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ನೆಕ್ಕರೆ ಗಿರಿಜನ ಕಾಲೋನಿಗೆ ಸಂಪರ್ಕಿಸುವ ರಸ್ತೆ ದುರಸ್ಥಿಗೊಳಿಸುವ ಬಗ್ಗೆ ಅಂಬೇಡ್ಕರ್ ರಕ್ಷಣಾ ವೇದಿಕೆಗೆ ನೆಕ್ಕರೆ ನಿವಾಸಿಗಳು ಮನವಿ ಸಲ್ಲಿಸಿದರು.

ಅರಂತೋಡು-ಎಲಿಮಲೆ ರಸ್ತೆಯಲ್ಲಿ ನೆಕ್ಕರೆ ಎಂಬ ಊರಿಗೆ ಹಾದು ಹೋಗುವ ರಸ್ತೆಯಾಗಿದ್ದು ಇಲ್ಲಿ ಸುಮಾರು ಆರು ಗಿರಿಜನ ಕುಟುಂಬಗಳು ವಾಸಮಾಡುತ್ತಿವೆ. ಆದರೆ ಈ ಊರಿಗೆ ಸುಮಾರು _10 ಕಿ.ಮೀ ದೂರ ಕಾಡಿನ ಮಧ್ಯದಲ್ಲಿ ಸಂಚರಿಸಬೇಕು.

ಕೆಲವು ಕಡೆಗಳಲ್ಲಿ ಮಾತ್ರ ಕಾಂಕ್ರೀಟಿಕರಣ, ಉಳಿದ ಕಡೆಗಳಲ್ಲಿ ಹೊಂಡ ಗುಂಡಿಗಳು ಇವೆ. ಹಾಗಾಗಿ 10 ಕಿ.ಮೀ ತನಕ ರಸ್ತೆ ಕಾಂಕ್ರೀಟಿಕರಣ ಮಾಡಬೇಕಾಗಿ ಗ್ರಾಮಸ್ಥರು ಬೇಡಿಕೆ ಇರಿಸಿದ್ದಾರೆ.

ಕೆಲವು ಕಡೆ ಗುಡ್ಡದಿಂದ ಬರುವ ನೀರು ರಸ್ತೆಯಲ್ಲಿ ಹರಿದು ಹೋಗುವುದರಿಂದ ಸಂಚಾರಕ್ಕೆ ಸಾದ್ಯವಾಗುವುದಿಲ್ಲ. ಇದರಿಂದ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಹಾಗೂ ಮಕ್ಕಳು ಶಾಲೆಗೆ ಹೋಗಲು ಕೂಡ ಅಸಾದ್ಯ. ರಸ್ತೆ ಮಧ್ಯೆ ಹೊಳೆ ಹರಿಯುತ್ತಿದ್ದು, ಸಂಕದ ಅನಿವಾರ್ಯವಿದೆ. ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಲು ಅಂಬೇಡ್ಕರ್ ರಕ್ಷಣಾ ವೇದಿಕೆಗೆ ಮನವಿ ಸಲ್ಲಿಸಲಾಯಿತು.
