Ad Widget .

ಊರು ಮುಳುಗುತ್ತಿರುವಾಗ ಮಸಾಲೆ ದೋಸೆ ಪ್ರಮೋಷನ್ ನಲ್ಲಿ ತೊಡಗಿದ ತೇಜಸ್ವಿ ಸೂರ್ಯ| ಸಂಸದರ ಸೋಗಲಾಡಿತನಕ್ಕೆ ಜಾಲತಾಣದಲ್ಲಿ ಆಕ್ರೋಶ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ವರುಣಾರ್ಭಟಕ್ಕೆ ಜನತೆ ಕಂಗೆಟ್ಟು ಹೋಗಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿಯುಂಟಾಗಿದೆ. ಆದರೆ ಜನಪ್ರತಿನಿಧಿಗಳು ಮಾತ್ರ ಜನರ ಸಂಕಷ್ಟಕ್ಕೆ ಸ್ಪಂದಿಸುವುದನ್ನು ಬಿಟ್ಟು ಆರಾಮವಾಗಿ ಕಾಲಹರಣ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಪುಷ್ಟಿ ನೀಡುವಂತಿದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮಳೆಯ ನಡುವೆ ಸಂಸದ ತೇಜಸ್ವಿ ಸೂರ್ಯ ಮಸಾಲೆ ದೋಸೆ ಸವಿಯುತ್ತಿರುವ ವಿಡಿಯೋ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರಾಜಧಾನಿ ಬೆಂಗಳೂರು ಮಳೆಯ ಆರ್ಭಟಕ್ಕೆ ಬಹುತೇಕ ಮುಳುಗಡೆಯಾಗಿದೆ. ಇಡೀ ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳು, ಬಡಾವಣೆಗಳು, ಮನೆಗಳು ಜಲಾವೃತಗೊಂಡಿವೆ. ಅನ್ನ, ಆಹಾರಕ್ಕೂ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ತನ್ನದೇ ಕ್ಷೇತ್ರದ ಜನರ ಸಮಸ್ಯೆ ಆಲಿಸುವುದನ್ನು ಬಿಟ್ಟು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೋಟೆಲ್ ನಲ್ಲಿ ಮಸಾಲೆ ದೋಸೆ, ವಡಾ ಸಾಂಬಾರ್ ಸವಿಯುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad Widget . Ad Widget . Ad Widget .

ಬೆಂಗಳೂರು ಮಳೆಯಿಂದ ನಲುಗಿ ಹೋಗಿರುವ ಇಂತಹ ಸಂದರ್ಭದಲ್ಲಿ ಹೋಟೆಲ್​ನಲ್ಲಿ ದೋಸೆ ಸವಿಯುತ್ತಿರುವ ವಿಡಿಯೋ ಪೋಸ್ಟ್​ ಮಾಡಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜನ ನಿಮ್ಮನ್ನು ಆರಿಸಿ ಕಳಿಸಿದ್ದು‌ ನೆರವಾಗಲಿ ಎಂದು, ಆದರೆ ನೀವು ಮಾಡ್ತಿರೋದೇನು..? ಜನ ಸಾಯುತ್ತಿರಬೇಕಾದರೆ ಈ ರೀತಿ ಕರೆಯೋದು ಸರಿಯೇ..? ಆದರೆ ಇಂತಹ ಸಂದರ್ಭದಲ್ಲಿ ನೀವು ‌ಮಾಡುತ್ತಿರುವುದೇನು ಎಂದು ಕಿಡಿಕಾರಿದ್ದಾರೆ.

ಸ್ಯಾಂಡಲ್ ವುಡ್ ನಟಿ ರಮ್ಯಾ ಸಂಸದ ತೇಜಸ್ವಿ ಸೂರ್ಯ ಮಸಾಲೆ ದೋಸೆ ತಿನ್ನುತ್ತಿರುವ ವಿಡಿಯೋ ಶೇರ್ ಮಾಡಿ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರು ನಗರದ ಜನರು ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದರೆ ಸಂಸದರು ಮಾತ್ರ ಹೋಟೆಲ್ ನಲ್ಲಿ ಮಸಾಲೆ ದೋಸೆ ತಿಂದು ಪ್ರಮೋಟ್ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.

3 thoughts on “ಊರು ಮುಳುಗುತ್ತಿರುವಾಗ ಮಸಾಲೆ ದೋಸೆ ಪ್ರಮೋಷನ್ ನಲ್ಲಿ ತೊಡಗಿದ ತೇಜಸ್ವಿ ಸೂರ್ಯ| ಸಂಸದರ ಸೋಗಲಾಡಿತನಕ್ಕೆ ಜಾಲತಾಣದಲ್ಲಿ ಆಕ್ರೋಶ”

  1. Srinivasa Prasad

    This is very bad comment by hand people. Can’t he take dosa in breakfast? It’s sin? Bad people think and do bad always. 👎👺

    1. The article is in very bad taste. Has anyone including the author of the article has stopped eating after rain havoc. The people’s representatives are also humans and are eligible for all normal life activities.

Leave a Comment

Your email address will not be published. Required fields are marked *