ಸಮಗ್ರ ನ್ಯೂಸ್: ಸಿಎಂ ಬೊಮ್ಮಾಯಿ ಬೆಂಗಳೂರು ಮಳೆ ಹಾನಿ ಮಾಹಿತಿ ಪಡೆದಿದ್ದು, ರಾಜ್ಯದ ಮಳೆ ಪರಿಸ್ಥಿತಿ ನಿರ್ವಹಣೆಗೆ 600 ಕೋಟಿ ರಿಲೀಸ್ ಮಾಡಿದೆ. ಬೆಂಗಳೂರಿಗೆ 300 ಕೋಟಿ ಬಿಡುಗಡೆ ಮಾಡಲು ತೀರ್ಮಾನ ಮಾಡಿದೆ.

ಸ್ಟಾರ್ಮ್ ವಾಟರ್ ಡ್ರೈನ್ ಮಾಡಲು 300 ಕೋಟಿ ಬಿಡುಗಡೆ ಮಾಡಲಾಗುತ್ತದೆ. ಬೆಂಗಳೂರಿಗೆ ಕಾವೇರಿ ನೀರು ಪಂಪ್ ಮಾಡುವ ಸ್ಥಳಕ್ಕೂ ಭೇಟಿ ನೀಡಿದ್ಧಾರೆ. ತೊರೆಕಾಡನಹಳ್ಳಿಯಲ್ಲಿ BWSSB ಪಂಪ್ ಹೌಸ್ ಮುಳುಗಿದೆ. ಸೆಪ್ಟೆಂಬರ್ ಆರಂಭದಲ್ಲೇ ಶೇ.51ರಷ್ಟು ದಾಖಲೆ ಮಳೆ ಆಗಿದೆ. 17 ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅನಾಹುತವಾಗಿದೆ. ಕಳೆದ 5 ದಿನಗಳಲ್ಲಿ 32 ಸಾವಿರಕ್ಕೂ ಹೆಚ್ಚು ಎಕರೆ ಜಲಾವೃತವಾಗಿದೆ. 2388 ಮನೆಗಳಿಗೆ ಹಾನಿ, 2550 ಕಿ.ಮೀ. ರಸ್ತೆಗೆ ಹಾನಿಯಾಗಿದೆ. ತೀವ್ರ ಹಾನಿಯಾಗಿದ್ದರೆ 5 ಲಕ್ಷ, ಭಾಗಶಃ ಹಾನಿಯಾಗಿದ್ರೆ 3 ಲಕ್ಷ ನೀಡಲಾಗುತ್ತದೆ.

ಈ ನಡುವೆ ಬೆಂಗಳೂರಿಗೆ ಗಾಯದ ಮೇಲೆ ಬರೆ ಹಾಕುತ್ತಿದ್ದು, ಕಳೆದ ರಾತ್ರಿಯೂ ಮಳೆರಾಯ ಅಬ್ಬರಿಸಿದ್ಧಾನೆ. ರಾತ್ರಿಯಿಡೀ ಬಿಟ್ಟೂ ಬಿಟ್ಟು ಮಳೆ ಸುರಿದಿದೆ. ಮೊದಲೇ ಮುಳುಗಿದ್ದ ಬೆಂಗಳೂರಿಗೆ ಮಳೆ ಶಾಕ್ ನೀಡಿದೆ. ಇನ್ನೂ ಮೂರ್ನಾಲ್ಕು ದಿನ ಮಳೆ ಸುರಿಯೋ ಸಾಧ್ಯತೆಗಳಿವೆ.
ಮೋಡವೇ ತೂತಾದಂತೆ ನೀರು ಸುರಿಯುತ್ತಿದೆ. ಪೂರ್ವ ಬೆಂಗಳೂರು ಪತರಗುಟ್ಟಿ ಹೋಗಿದ್ದು ರಸ್ತೆಗಳು ಪ್ರವಾಹ ಸ್ವರೂಪ ಪಡೆದುಕೊಂಡಿವೆ. ಬೆಂಗಳೂರು ಲೇಔಟ್ಗಳು ನೀರಿನಲ್ಲಿ ತೇಲಾಡುತ್ತಿದೆ. ಜನ ಜೀವನ ದುಸ್ತರ, ವಲಸೆ ಕಾರ್ಮಿಕರ ಸ್ಥಿತಿ ಅಯೋಮಯವಾಗಿದೆ. ಟ್ರ್ಯಾಕ್ಟರ್, ರಬ್ಬರ್ ಬೋಟ್ ಬಳಸಿ ತಗ್ಗು ಪ್ರದೇಶದ ಜನರ ರಕ್ಷಣೆ ಮಾಡಲಾಗಿದೆ.
ಸರ್ಜಾಪುರ ರಸ್ತೆಯ ರೈನ್‌ಬೊ ಡ್ರೈವ್, ಸನ್ನಿ ಬ್ರೂಕ್ಸ್, ಕಂಟ್ರಿ ಸೈಡ್ ಐಷಾರಾಮಿ ಬಡಾವಣೆಗಳಲ್ಲಿ ಭಾರೀ ಹಾನಿಯಾಗಿದೆ. ಕೋಟಿ-ಕೋಟಿ ಖರ್ಚು ಮಾಡಿ ಕಟ್ಟಿಸಿದ್ದ ಮನೆಗಳಿಗೆ ನೀರು ನುಗ್ಗಿದೆ. ತೂಬರಹಳ್ಳಿ, ಮುನ್ನೇಕೊಳಲು, ಕಗ್ಗದಾಸನಪುರ, BEML ಲೇಔಟ್ , ಯಮಲೂರಿನ 70 ಡಿಗ್ರಿ ಟೌನ್ ಸೆಂಟರ್ ಮುಳುಗಡೆಯಾಗಿದೆ.