Ad Widget .

ಕ್ರಿಕೆಟ್ ಅಂಗಳಕ್ಕೆ‌ ಗುಡ್ ಬೈ ಹೇಳಿದ ಸುರೇಶ್ ರೈನಾ

ಸಮಗ್ರ ನ್ಯೂಸ್: ಎಲ್ಲಾ ಮಾದರಿಯ ಕ್ರಿಕೆಟ್​​ ಫಾರ್ಮ್ಯಾಟ್​ಗಳಿಗೆ ಟೀಂ ಇಂಡಿಯಾ ಆಟಗಾರ‌ಸುರೇಶ್ ರೈನಾ ಗುಡ್​ಬೈ ಹೇಳಿದ್ದಾರೆ.

Ad Widget . Ad Widget .

ಸಾಮಾಜಿಕ ಮಾಧ್ಯಮಗಳಲ್ಲಿ ನಿವೃತ್ತಿ ಬಗ್ಗೆ ಘೋಷಣೆ ಮಾಡಿದ್ದು, ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಾನು ವಿದಾಯ ಹೇಳುತ್ತಿದ್ದೇನೆ. ದೇಶ ಮತ್ತು ನನ್ನ ರಾಜ್ಯ ಉತ್ತರ ಪ್ರದೇಶವನ್ನ ಪ್ರತಿನಿಧಿಸುವುದು ಒಂದು ಸಂಪೂರ್ಣ ಗೌರವವಾಗಿದೆ.

Ad Widget . Ad Widget .

ನನ್ನ ಕ್ರಿಕೆಟ್ ಬದುಕಿನಲ್ಲಿ ಸಹಕಾರ ನೀಡಿದ ಬಿಸಿಸಿಐ, ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್, ಚೆನ್ನೈ ಐಪಿಎಲ್, ರಾಜೀವ್ ಶುಕ್ಲಾ, ನನ್ನ ಕುಟುಂಬ ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.

13 ವರ್ಷಗಳ ಕಾಲ ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡಿರುವ ಸುರೇಶ್ ರೈನಾ, 18 ಟೆಸ್ಟ್​ ಪಂದ್ಯಗಳು, 226 ಏಕದಿನ ಪಂದ್ಯ ಹಾಗೂ 78 ಟಿ-20 ಪಂದ್ಯಗಳನ್ನ ಆಡಿದ್ದಾರೆ. ಮಾತ್ರವಲ್ಲ, ಟೀಂ ಇಂಡಿಯಾವನ್ನು ಮುನ್ನೆಡಿಸಿ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಕಳೆದ ಬಾರಿಯ ಐಪಿಎಲ್​ನಲ್ಲಿ ರೈನಾರನ್ನ ಚೆನ್ನೈ ಸೂಪರ್ ಕಿಂಗ್ಸ್​ ಕೈಬಿಟ್ಟಿತ್ತು. ಹರಾಜು ಪ್ರಕ್ರಿಯೆಯಲ್ಲಿ ಅನ್​ಸೋಲ್ಡ್​ ಆಗಿದ್ದರು.

Leave a Comment

Your email address will not be published. Required fields are marked *