ಮೊಬೈಲ್ ನೋಡ್ತಾ ನೋಡ್ತಾ ಸ್ಕೂಟರ್ ಗೆ ಡಿಕ್ಕಿ ಹೊಡೆದ ಟ್ಯಾಂಕರ್; ಮಹಿಳೆ ಸಾವು, ಚಾಲಕ ಪರಾರಿ

ಸಮಗ್ರ ನ್ಯೂಸ್: ನಗರದ ಸಂಭವಿಸಿದ ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.

Ad Widget ... ..

ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಕೂಟರ್ ಚಲಾಯಿಸುತ್ತಿದ್ದ ಮಹಿಳೆ ಮೇಲೆ ಟ್ಯಾಂಕರ್​ ಹತ್ತಿಸಿದ ಘಟನೆ ಲಗ್ಗೆರೆ ಬಸ್ ನಿಲ್ದಾಣ ಬಳಿಯ ಗ್ರೇಸ್ ಪಬ್ಲಿಕ್ ಸ್ಕೂಲ್ ಮುಂಭಾಗ ಸಂಭವಿಸಿದೆ. ಮೃತರನ್ನು ಆಶಾ ಎಂದು ಗುರುತಿಸಲಾಗಿದೆ.

Ad Widget

ಆಶಾ ಅವರು ಕಿಮ್ಸ್ ಅಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಬಸ್ ನಿಲ್ದಾಣ ಕಡೆಯಿಂದ ಲಗ್ಗೆರೆಯಲ್ಲಿರುವ ಮನೆ ಕಡೆಗೆ ತೆರಳುತಿದ್ದರು. ಸ್ಕೂಲ್ ಮುಂದೆ ಬಂದಾಗ ರಸ್ತೆ ಬದಿಯಲ್ಲಿ ಎಡಭಾಗದಲ್ಲಿ ತೆರಳುತ್ತಿದ್ದ ಆಶಾ ಅವರಿಗೆ ಟ್ಯಾಂಕರ್​ ಡಿಕ್ಕಿ ಹೊಡೆದಿದೆ.

ಕಿರಿದಾದ ರಸ್ತೆಯಲ್ಲಿ ಮೊಬೈಲ್ ನೋಡ್ತಾ ನೋಡ್ತಾ ಟ್ಯಾಂಕರ್​ ಚಾಲಕ ಮಹಿಳೆ ಮೇಲೆ ವಾಹನವನ್ನು ಹತ್ತಿಸಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ಬಳಿಕ ಚಾಲಕ ಟ್ಯಾಂಕರ್​ನ್ನು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಈ ಘಟನೆ ಕುರಿತು ರಾಜಾಜಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *