Ad Widget .

ಸಾವಿಗೆ ಶರಣಾದ ನೇಗಿನಹಾಳ ಬಸವಸಿದ್ದಲಿಂಗ ಸ್ವಾಮೀಜಿ ಡೆತ್ ನೋಟ್ ಪತ್ತೆ ಸತ್ಯ ಬಯಲು !

ಮಹಿಳೆಯರ ಆಡಿಯೋ ವೈರಲ್‌ ಆದ ಹಿನ್ನೆಲೆ ಮನನೊಂದು ಸಾವಿಗೆ ಶರಣಾದ ನೇಗಿನಹಾಳ ಬಸವಸಿದ್ದಲಿಂಗ ಸ್ವಾಮೀಜಿ ಅವರು ಬರೆದಿರುವ ಡೆತ್‌ ನೋಟ್‌ ಇದೀಗ ಪತ್ತೆಯಾಗಿದೆ. ಚಿತ್ರದುರ್ಗದ ಸ್ವಾಮೀಜಿಗಳ ಲೈಂಗಿಕ ಹಗರಣವನ್ನು ಉಲ್ಲೇಖಿಸಿದ್ದಳು, ಆ ಆಡಿಯೋ ವೈರಲ್‌ ಆಗಿತ್ತು.

Ad Widget . Ad Widget .

2007 ರಲ್ಲಿ ಮಡಿವಾಳೇಶ್ವರ ಪೀಠ ಅಲಂಕರಿಸಿದ್ದ ಬಸವಸಿದ್ದಲಿಂಗ ಸ್ವಾಮೀಜಿ 15 ವರ್ಷಗಳಿಂದ ಮಡಿವಾಳೇಶ್ವರ ಪೀಠಾಧಿಪತಿ ಆಗಿದ್ದರು. ನಿನ್ನೆ ತಡರಾತ್ರಿವರೆಗೂ ಕೂಡ ಭಕ್ತರ ಜೊತೆ ಅವರು ಮಾತುಕಥೆಯನ್ನು ನಡೆಸಿದ್ದರು. ಸೇವಕರು ಬೆಳಿಗ್ಗೆ ಸ್ವಾಮೀಜಿ ಕೋಣೆಗೆ ಹೋದಾಗ ಅವರು ಸಾವಿಗೀಡಗಿರುವ ವಿಷಯ ತಿಳಿದುಬಂದಿದೆ. ನೇಗಿನಹಾಳ ಗ್ರಾಮದಲ್ಲೀಗ ಮೌನ ಆವರಿಸಿದೆ.

Ad Widget . Ad Widget .

ಪತ್ರದಲ್ಲಿ ಅವರು 2 ವಿಚಾರಗಳನ್ನು ಅವರು ತಿಳಿಸಿದ್ದು ಮೊದಲನೆಯದಾಗಿ ಇಬ್ಬರು ಮಹಿಳೆಯರು ಮಾತನಾಡಿ ಆಡಿಯೋ ಕೆಲವು ದಿನಗಳ ಹಿಂದೆ ಬಹಿರಂಗವಾಗಿತ್ತು, ಆ ಆಡಿಯೋದಲ್ಲಿ ನೇಗಿನಹಾಳ ಮಠದ ಸ್ವಾಮೀಜಿಗಳು ಹಾಗೇ ಎಂದು ಮಹಿಳೆಯರು ಮಾತನಾಡಿಕೊಂಡಿದ್ದರು.

ಈ ಆಡಿಯೋದಲ್ಲಿ ನನ್ನ ಹೆಸರು ಇರುವುದರಿಂದ ನನಗೆ ತೀವ್ರನೋವಾಗಿದೆ, ಜೀವನವೇ ಬೇಡ ಎನ್ನುವಂತಾಗಿದೆ. ಎಂದು ಭಾನುವಾರದಂದು ಅವರು ಭಕ್ತಾಧಿಗಳ ಜೊತೆ ಹೇಳಿಕೊಂಡು ಬಹಳ ನೊಂದಿದ್ದರು ಎನ್ನಲಾಗಿದೆ.

Leave a Comment

Your email address will not be published. Required fields are marked *