ನಟನೆಯಿಂದ ದೂರ ಉಳಿತಾರಾ ನಯನತಾರ? ಇಲ್ಲಿದೆ ಉತ್ತರ

ಸಮಗ್ರ ನ್ಯೂಸ್: ಟಾಲಿವುಡ್ ನ ಸೂಪರ್ ಸ್ಟಾರ್ ನಟಿ ನಯನತಾರ ಮದುವೆ ಬಳಿಕ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಬಗ್ಗೆ ಟಾಲಿವುಡ್‌ನಲ್ಲಿ ಸುದ್ದಿ ಹಬ್ಬಿದೆ. ನಟಿ ನಯನತಾರಾ ಮದುವೆ ಬಳಿಕ ಸಿನಿಮಾದಲ್ಲಿ ಅಭಿನಯಿಸದಿರಲು ನಿರ್ಧಾರಿಸಿದ್ದಾರಂತೆ. ಹಾಗಂತ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಆಗಲ್ಲ. ಬದಲಿಗೆ ಒಂದು ದೊಡ್ಡ ಬ್ರೇಕ್ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದರಂತೆ. ಬ್ರೇಕ್ ಬಳಿಕ ಮತ್ತೆ ಕಮ್ ಬ್ಯಾಕ್‌ ಕೂಡ ಮಾಡಲಿದ್ದಾರೆ ನಯನತಾರಾ.

Ad Widget ... ..

ಬ್ರೇಕ್ ತೆಗೆದುಕೊಳ್ಳುವುದು ಮಾತ್ರ ಅಲ್ಲ. ನಯನತಾರಾ ಒಂದಷ್ಟು ಷರತ್ತುಗಳನ್ನು ನಯನತಾರಾ ಹಾಕಿದ್ದಾರೆ. ಅಂದರೆ ಮದುವೆ ಬಳಿಕ ಬ್ರೇಕ್ ತೆಗೆದುಕೊಂಡು, ಕಮ್‌ಬ್ಯಾಕ್ ಮಾಡಿದಾಗ ಆಪ್ತ ದೃಶ್ಯಗಳಲ್ಲಿ ನಟಿಸುವುದಿಲ್ಲವಂತೆ. ನಟರ ಜೊತೆಗೆ ತೆರೆ ಮೇಲೆ ರೊಮ್ಯಾನ್ ಮಾಡುವುದಿಲ್ಲವಂತೆ ನಯನತಾರಾ. ಈ ಬಗ್ಗೆ ನಯನತಾರ ಹೇಳಿಕೊಳ್ಳದೇ ಇದ್ದರೂ, ಟಾಲಿವುಡ್‌ನಲ್ಲಿ ಗಾಸಿಪ್ ಹಬ್ಬಿದೆ.

Ad Widget

Leave a Comment

Your email address will not be published. Required fields are marked *