ಸಮಗ್ರ ನ್ಯೂಸ್: ಬ್ರಿಟನ್ ನ ಪ್ರಧಾನಿ ಹುದ್ದೆಗೆ ಮಾಜಿ ಸಚಿವರಾದ ರಿಷಿ ಸುನಾಕ್ ಮತ್ತು ಲಿಝ್ ಟ್ರೂಸ್ ಮಧ್ಯೆ ಕಳೆದ ಕೆಲ ದಿನಗಳಿಂದ ನಡೆದ ತುರುಸಿನ ಪೈಪೋಟಿ ಅಂತ್ಯಗೊಂಡಿದ್ದು, ಲಿಝ್ ಟ್ರೂಸ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಮೂಲದ ರಿಷಿ ಸುನಕ್ ಅವರಿಗೆ ಹಿನ್ನಡೆಯಾಗಿದೆ.
ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾಗಿರುವ ಪ್ರಧಾನಿ ಹುದ್ದೆಗೆ ಕನ್ಸರ್ವೇಟಿವ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಅಂತಿಮ ಹಂತದಲ್ಲಿ ದೇಶದಾದ್ಯಂತ ಸುಮಾರು 2 ಲಕ್ಷ ಕನ್ಸರ್ವೇಟಿವ್ ಪಕ್ಷದ ಸದಸ್ಯರು ಅಂಚೆಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಬ್ರಿಟನ್ ಕಾಲಮಾನ ಶುಕ್ರವಾರ ಸಂಜೆ 5 ಗಂಟೆಗೆ ಪ್ರಕ್ರಿಯೆ ಮುಕ್ತಾಯಗೊಂಡಿತು.
ಮೊನ್ನೆಯೇ ಕನ್ಸರ್ವೇಟಿವ್ ಪಕ್ಷದ ಚುನಾವಣೆ ಮುಕ್ತಾಯವಾಗಿತ್ತು. ಇಂದು ಮತ ಎಣಿಕೆಯಾಗಿ ಫಲಿತಾಂಶ ಪ್ರಕಟವಾಗಿದೆ. ರಿಷಿ ಸುನಕ್ ವಿರುದ್ಧ ಲಿಜ್ ಟ್ರಸ್ 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಲಿಜ್ ಟ್ರುಸ್ 81,326 ಮತಗಳನ್ನು ಪಡೆದರೆ ರಿಷಿ ಸುನಕ್ 60,399 ಮತಗಳನ್ನು ಗಳಿಸಿದರು.
ಬ್ರಿಟನ್ ದೇಶ ಆರ್ಥಿಕವಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಈ ಸಂದರ್ಭದಲ್ಲಿ ಲಿಜ್ ಟ್ರುಸ್ ಪ್ರಧಾನಿಯಾಗಿ ಗುರುತರ ಜವಾಬ್ದಾರಿ ಹೊಂದಿದ್ದಾರೆ.
ರಿಷಿ ಸುನಕ್ ವಿರುದ್ಧ ಲಿಜ್ ಟ್ರಸ್ ಗೆಲುವು ಸಾಧಿಸುವುದು ನಿರೀಕ್ಷಿತವೇ ಆಗಿತ್ತು. ಹಣಕಾಸು ಸಚಿವರಾಗಿ ರಿಷಿ ಸುನಕ್ ದೇಶದ ಜನತೆಗೆ ತೆರಿಗೆಗಳ ಬರೆ ಹಾಕಿದ್ದು ಬಹುಶಃ ಅವರ ಸೋಲಿಗೆ ಕಾರಣ ಎಂದು ಹೇಳಲಾಗಿದೆ.