Ad Widget .

ಸಾರ್ವಜನಿಕ ಗಣೇಶ ಮಂಟಪ ಕುಸಿದು ಬಿದ್ದು,ಹಲವರಿಗೆ ಗಾಯ

ಸಮಗ್ರ ನ್ಯೂಸ್ : ದರ್ಶನಕ್ಕೆ ಭಕ್ತರ ಭಾರ ತಾಳದೇ ಜಿಲ್ಲೆಯ ಸಾರ್ವಜನಿಕ ಗಣೇಶ ಮಂಟಪ ಕುಸಿದು ಬಿದ್ದು, ಹಲವರಿಗೆ ಗಾಯಗಳಾದ ಘಟನೆಯೊಂದು ಸಿಂದಗಿ ಪಟ್ಟಣದಲ್ಲಿ ಶನಿವಾರ ಸಂಭವಿಸಿದೆ.

Ad Widget . Ad Widget .

ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಗೋಪುರ ಸಹಿತ ಸ್ವರ್ಣ ವರ್ಣದ ದೇವಾಲಯ ಮಾದರಿಯಲ್ಲಿ ಗಣೇಶೋತ್ಸವ ಮಂಟಪ ನಿರ್ಮಿಸಲಾಗಿತ್ತು.

Ad Widget . Ad Widget .


ಗಣೇಶ ಮಂಟಪ ಇದೇ ಕಾರಣಕ್ಕೆ ಜನಾಕರ್ಷಣೆಗೆ ಕಾರಣವಾಗಿತ್ತು. ಆಕರ್ಷಕ ಅಲಂಕೃತ ಮಂಟಪ ವೀಕ್ಷಿಸಲು ಶನಿವಾರ ಭಾರಿ ಸಂಖ್ಯೆಯಲ್ಲಿ ಜನ ಸಾಗರವೇ ಮಂಟಪಕ್ಕೆ ಆಗಮಿಸಿತ್ತು. ಇದರಿಂದ ಭಾರ ತಾಳಲಾರದೇ ದೇವಾಲಯ ಮಾದರಿ ಮಂಟಪ ನೆಲಕ್ಕೆ ಉರುಳಿ ಬಿದ್ದಿದೆ.

ಇದರಿಂದಾಗಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಂದಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನಿಂದ ನೆಲಕ್ಕುರುಳಿದ್ದ ಮಂಟಪದ ಅಡಿಯಲ್ಲಿ ಸಿಲುಕಿ ಅಪಾಯದಲ್ಲಿ ಇದ್ದವರನ್ನು ಪಾರು ಮಾಡಿದ್ದಾರೆ.

Leave a Comment

Your email address will not be published. Required fields are marked *