Ad Widget .

ಪ್ರಿಯವಾದ ಖಾದ್ಯ ಪಕೋಡ ಅದೇ ಮಗುವಿಗೆ ಹೆಸರಿಟ್ಟ ಯುಕೆ ದಂಪತಿಗಳು

ಸಮಗ್ರ ನ್ಯೂಸ್ : ತಮ್ಮ ಮಗುವಿಗೆ ದಂಪತಿಗಳು ಭಾರತೀಯ ಖಾದ್ಯಗಳಲ್ಲಿ ಒಂದಾದ ಪಕೋಡ ಎಂಬ ಹೆಸರಿಟ್ಟು ಅಚ್ಚರಿ ಮೂಡಿಸಿದ್ದಾರೆ. ಇಂಥದೊಂದು ಘಟನೆ ಯುಕೆಯಲ್ಲಿ ನಡೆದಿದೆ.

Ad Widget . Ad Widget .

ಐರ್ಲೆಂಡ್ ನ ಪ್ರಖ್ಯಾತ ರೆಸ್ಟೋರೆಂಟ್ ನ್ಯೂ ಟೌನ್ ಅಬ್ಬೆ ಈ ವಿಚಾರವನ್ನು ಸೋಷಿಯಲ್‌ ಮಿಡಿಯಾ ದಲ್ಲಿ ಹಂಚಿಕೊಂಡಿದ್ದು, ಈ ರೆಸ್ಟೋರೆಂಟ್ ಗೆ ನಿತ್ಯವೂ ಭೇಟಿ ನೀಡುತ್ತಿದ್ದ ದಂಪತಿ ಅಲ್ಲಿನ ನೆಚ್ಚಿನ ಖಾದ್ಯ ಪಕೋಡ ಹೆಸರನ್ನೇ ತಮ್ಮ ಮಗುವಿಗೆ ಇಟ್ಟಿದ್ದಾರೆ. ಇವರು ಭೇಟಿ ನೀಡಿದಾಗೆಲ್ಲ ಪಕೋಡ ಹೆಸರಿನಿಂದ ಕರೆಯಲಾಗುವ ಖಾದ್ಯಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರಂತೆ.

Ad Widget . Ad Widget .

ಮಳೆಗಾಲದ ವೇಳೆ ನಾವುಗಳು ಕಾಫಿ ಜೊತೆಗೆ ಪಕೋಡ ಸವಿಯುತ್ತಿದ್ದರೆ, ಪಕೋಡ ಪ್ರಿಯ ಈ ದಂಪತಿ ತಮ್ಮ ಮಗುವಿಗೆ ಆ ಹೆಸರನ್ನೇ ಇಡುವ ಮೂಲಕ ಎಲ್ಲರನ್ನು ಬೆರಗಾಗಿಸಿದ್ದಾರೆ. ರೆಸ್ಟೋರೆಂಟ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಲ್ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಚಿಕನ್ ಪಕೋಡ ಸೇರಿದಂತೆ ಹಲವು ಖಾದ್ಯಗಳ ಹೆಸರಿದೆ.

ಈ ಬಗ್ಗೆ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಕೆಲವರು ತಮಾಷೆ ಮಾಡಿದ್ದಾರೆ. ಒಬ್ಬರಂತೂ ತಾನು ಗರ್ಭಿಣಿಯಾದ ವೇಳೆ ಬಾಳೆಹಣ್ಣು ಹಾಗೂ ಕಲ್ಲಂಗಡಿ ಇಷ್ಟಪಡುತ್ತಿದ್ದೆ. ಆದರೆ ಸದ್ಯ ನಾನು ನನ್ನ ಮಗುವಿಗೆ ಆ ಹೆಸರನ್ನು ಇಡಲಿಲ್ಲ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *