Ad Widget .

ಭಾರತದ ಮುಂದಿನ ಪ್ರಧಾನಿಯಾಗ್ತಾರಂತೆ ಈ ವ್ಯಕ್ತಿ| ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ ಅನಿರುದ್ದ್

ಸಮಗ್ರ ನ್ಯೂಸ್: ಭವಿಷ್ಯದಲ್ಲಿ ಭಾರತದ ಪ್ರಭಾವಿ ಪ್ರಧಾನಿಯಾಗುವ ಯೋಗ ಯೋಗಿ ಆದಿತ್ಯ ನಾಥ್ ಗೆ ಇದೆ. ಇವರೇ ಮುಂದಿನ ಸದೃಢ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಖ್ಯಾತ ಜೋತಿಷಿ ಅನಿರುದ್ಧ ಕುಮಾರ್ ಮಿಶ್ರ ಹೇಳಿದ್ದಾರೆ.

Ad Widget . Ad Widget .

ಈ ಹಿಂದೆ 2023ರ ವೇಳೆಗೆ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಭವಿಷ್ಯ ನುಡಿದು ಅಚ್ಚರಿ ಮೂಡಿಸಿದ್ದ ಅವರು, ಪ್ರಸ್ತುತ ಯೋಗಿ ಆದಿತ್ಯನಾಥ್ ಅವರ ಜಾತಕಫಲವನ್ನು ಬಹಿರಂಗ ಪಡಿಸಿದ್ದಾರೆ. ಭಾರತ ಸಂಜಾತ ಸನ್ಯಾಸಿಯೊಬ್ಬರು ದೀರ್ಘಕಾಲದವರೆಗೆ ದೇಶಕ್ಕಾಗಿ ಸೇವೆ ಸಲ್ಲಿಸಲಿದ್ದಾರೆ. ಯಾರೂ ಕೂಡ ಅವರನ್ನು ಎದುರಿಹಾಕಿಕೊಳ್ಳಲು ದೈರ್ಯ ತೋರುವುದಿಲ್ಲ ಎಂದು ಹೇಳಿ ಯೋಗಿ ಆದಿತ್ಯನಾಥ್ ಫೋಟೋವನ್ನು ಲಗತ್ತಿಸಿ ಮಿಶ್ರ ಅವರು ಟ್ವೀಟ್ ಮಾಡಿದ್ದಾರೆ.

Ad Widget . Ad Widget .

ಮುಂದಿನ ದಿನಗಳಲ್ಲಿ ಭಾರತ ಬದಲಾಗುತ್ತದೆ. ಜಗತ್ತಿನಾದ್ಯಂತ ಭಾರತ ದೇಶದ ಗೌರವ ಹೆಚ್ಚುತ್ತದೆ ಎಂದು ಹೇಳಿದ್ದಾರೆ.ಆಡಳಿತ ವ್ಯವಸ್ಥೆಯಲ್ಲೂ ಗಮನಾರ್ಹ ಬದಲಾವಣೆಯಾಗುತ್ತದೆ ಎಂದು ಹೇಳಿರುವ ಅವರು, ಮುಂದಿನ ಕೆಲವೇ ವರ್ಷಗಳಲ್ಲಿ ದೇಶದ ಜನತೆ ನೋಡಬಹುದು ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *