ಮಂಗಳೂರು: ಪ್ರಧಾನಿ ಸಮಾವೇಶದಲ್ಲಿ ನಾಪತ್ತೆಯಾಗಿದ್ದ ಬಾಲಕಿ ಪತ್ತೆ

ಸಮಗ್ರ ನ್ಯೂಸ್ : ಮಂಗಳೂರಿನ ಕೂಳೂರಿನಲ್ಲಿ ಶುಕ್ರವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಬಂದು ಜನಜಂಗುಳಿಯ ನಡುವೆ ಹೆತ್ತವರ ಕೈ ತಪ್ಪಿ ನಾಪತ್ತೆಯಾಗಿದ್ದ ಬಾಲಕಿಯನ್ನು ಪೊಲೀಸರು ಮರಳಿ ಹೆತ್ತವರ ವಶಕ್ಕೆ ಒಪ್ಪಿಸಿದ ಘಟನೆ ವರದಿಯಾಗಿದೆ.

Ad Widget ... ..

ಕಾವೂರು ಜ್ಯೋತಿನಗರದ ನಿವಾಸಿ ಯಮನಪ್ಪ- ದೇವಕಿ ದಂಪತಿಯ ಪುತ್ರಿ , ನಾಲ್ಕನೇ ತರಗತಿ ವಿದ್ಯಾರ್ಥಿನಿ ಪ್ರಜಾ ಮೇಠಿ (10) ಹೆತ್ತವರೊಂದಿಗೆ ಶುಕ್ರವಾರ ಪ್ರಧಾನಿಯ‌ ಕಾರ್ಯಕ್ರಮದಲ್ಲಿ‌ ಪಾಲ್ಗೊಂಡಿದ್ದಳು. ಆದರೆ ಜನಜಂಗುಳಿಯ ಮಧ್ಯೆ ಹೆತ್ತವರ ಕೈ ತಪ್ಪಿ ಬೇರ್ಪಟ್ಟಿದ್ದಳು.

Ad Widget

ಪೊಲೀಸರ ಗಮನಕ್ಕೆ ಬಂದ ನಂತರ ಸಂಚಾರ ಉಪವಿಭಾಗದ ಎಸಿಪಿ‌ ಗೀತಾ ಕುಲಕರ್ಣಿ ‌ನೇತೃತ್ವದಲ್ಲಿ ವಿದ್ಯಾರ್ಥಿನಿ ಹೆತ್ತವರ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಹೆತ್ತವರ ವಶಕ್ಕೆ ಒಪ್ಪಿಸಿದ್ದಾರೆ.

Leave a Comment

Your email address will not be published. Required fields are marked *