Ad Widget .

ಬ್ರಿಟನ್ ನಲ್ಲಿ ಮತದಾನ ಪ್ರಕ್ರಿಯೆ ಅಂತ್ಯ| ಸೆ.5ಕ್ಕೆ‌ ಮತ ಎಣಿಕೆ; ಪ್ರಧಾನಿಯಾಗ್ತಾರಾ ರಿಷಿ ಸುನಕ್?

ಸಮಗ್ರ ನ್ಯೂಸ್: ಟೋರಿ ಪಕ್ಷದ ಮುಖ್ಯಸ್ಥ ಹಾಗೂ ಬ್ರಿಟನ್‌ ಪ್ರಧಾನಿ ಆಯ್ಕೆಗಾಗಿ ಪಕ್ಷದ ಕಾರ್ಯಕರ್ತರಿಂದ ನಡೆದ ಮತ ಚಲಾವಣೆ ಪ್ರಕ್ರಿಯೆ ಶುಕ್ರವಾರ ಮುಕ್ತಾಯಗೊಂಡಿದೆ.

Ad Widget . Ad Widget .

ಸೆ. 5ರಂದು ಮತ ಎಣಿಕೆ ನಡೆಯಲಿದ್ದು, ಕಣದಲ್ಲಿರುವ ಮಾಜಿ ಸಚಿವ ರಿಷಿ ಸುನಕ್‌ ಹಾಗೂ ವಿದೇಶಾಂಗ ಕಾರ್ಯದರ್ಶಿ ಲಿಜ್‌ ಟ್ರಸ್‌ ಪೈಕಿ ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂಬುದು ಆ ದಿನ ಬಹಿರಂಗವಾಗಲಿದೆ.

Ad Widget . Ad Widget .

‘ಕಳೆದ ಒಂದು ತಿಂಗಳಿನಿಂದ ಮತ ಚಲಾಯಿಸುವ ಪ್ರಕ್ರಿಯೆ ನಡೆದಿದೆ. ಟೋರಿ ಪಕ್ಷದ 1.60 ಲಕ್ಷದಷ್ಟು ಸದಸ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಸೋಮವಾರ ಮಧ್ಯಾಹ್ನ 12.30ರ ವೇಳೆ ಫಲಿತಾಂಶವನ್ನು ಪ್ರಕಟಿಸಲಾಗುವುದು’ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ಪಕ್ಷದ ಮುಖಂಡ ಸರ್ ಗ್ರಹಾಂ ಬ್ರ್ಯಾಡಿ ತಿಳಿಸಿದ್ದಾರೆ.

‘ರಿಷಿ ಸುನಕ್‌ ಹಾಗೂ ಲಿಜ್‌ ಟ್ರಸ್‌ ಅವರು ಬಹಳ ಉತ್ಸಾಹದಿಂದಲೇ ಈ ಚುನಾವಣೆಯಲ್ಲಿ ಪಾಲ್ಗೊಂಡಿದ್ದು, ಅವರಿಗೆ ಧನ್ಯವಾದ ಹೇಳುತ್ತೇನೆ. ಹಲವಾರು ವಿಷಯಗಳ ಬಗ್ಗೆ ಕಾರ್ಯಕರ್ತರು 600ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದರು. ಅಭ್ಯರ್ಥಿಗಳಿಬ್ಬರೂ ಈ ಪ್ರಶ್ನೆಗಳಿಗೆ ಉತ್ತರಿಸಿದರು’ ಎಂದು ಹೇಳಿದ್ದಾರೆ.

‘ಸೋಮವಾರ ಫಲಿತಾಂಶ ಪ್ರಕಟವಾಗಲಿದೆ. ನೂತನ ನಾಯಕನ ಮುಂದಾಳತ್ವದಲ್ಲಿ ನಾವು ಹೆಜ್ಜೆ ಹಾಕಲು ಸಿದ್ಧರಾಗಿದ್ದೇವೆ’ ಎಂದೂ ಸ್ಟೀಫನ್‌ಸನ್ ಹೇಳಿದ್ದಾರೆ.

Leave a Comment

Your email address will not be published. Required fields are marked *