ಬಂಟ್ವಾಳ; ಕಾರು ಡಿಕ್ಕಿ, ಎಲ್.ಕೆ.ಜಿ ವಿದ್ಯಾರ್ಥಿ ಬಲಿ

ಸಮಗ್ರ ನ್ಯೂಸ್: ಕಾರು ಡಿಕ್ಕಿ ಯಾಗಿ ಬಾಲಕ ಮೃತಪಟ್ಟ ಘಟನೆಯೊಂದು ತಾಲೂಕಿನ ಸುರಿಬೈಲು ಕಾಡಂಗಡಿ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.

Ad Widget ... ..

ಇಲ್ಲಿನ ಮಹಮ್ಮದಲಿ ಸಖಾಫಿ ಎಂಬವರ ಮಗ ಆದಿಲ್ (4) ಮೃತಪಟ್ಟ ಬಾಲಕ. ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಎಲ್.ಕೆ.ಜಿ. ವಿದ್ಯಾರ್ಥಿ.

Ad Widget

ಮನೆ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಾರುತಿ ಕಾರೊಂದು ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಮೃತದೇಹ ತುಂಬೆ ಖಾಸಗಿ ಆಸ್ಪತ್ರೆಯಲ್ಲಿದ್ದು ಅಲ್ಲಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Leave a Comment

Your email address will not be published. Required fields are marked *